ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಆರಂಭ : ತುಷಾರ್ ಗಿರಿನಾಥ್
ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್: ಕೆಲವೊಂದು ಕಡೆ ಇವಿಎಂನಲ್ಲಿ ಸಣ್ಣಪುಟ್ಟ ಸಮಸ್ಯೆ ಇತ್ತು. ಬೆಳಗ್ಗೆ 7 ಗಂ
ting-begins-in-bengaluru-without-any-problem-


ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್: ಕೆಲವೊಂದು ಕಡೆ ಇವಿಎಂನಲ್ಲಿ ಸಣ್ಣಪುಟ್ಟ ಸಮಸ್ಯೆ ಇತ್ತು. ಬೆಳಗ್ಗೆ 7 ಗಂಟೆಯ ಒಳಗಡೆ ಎಲ್ಲಾ ಸಮಸ್ಯೆ ಪರಿಹಾರ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮತದಾನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲಾ ಕಡೆ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಶುರುವಾಗಿದೆ. ಮತದಾನ ಹೆಚ್ಚಾಗಲು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ನಮಗೂ ಇದೊಂದು ಪರೀಕ್ಷೆ. ಈ ಬಾರಿ ಮತದಾನ ಹೆಚ್ಚಾಗುವ ನಿರೀಕ್ಷೆಯಿದೆ. ಬೆಂಗಳೂರು ಜನತೆ ಬಂದು ಮತ ಹಾಕಬೇಕು ಎಂದು ತುಷಾರ್ ಗಿರಿನಾಥ್ ಕೈ ಮುಗಿದು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್


 rajesh pande