ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್, ಬೆಂಗಳೂರು-ಮುಂಬೈ ಇಂದು ಹಣಾಹಣಿ
ಮುಂಬೈ,21 ಮಾರ್ಚ್ (ಹಿ.ಸ): ಆ್ಯಂಕರ್ ನವಿಮುಂಬೈಯ ಡಾ. ಡಿ ವೈ ಪಾಟೀಲ್ ಕ್ರೀಡಾ ಅಕಾಡೆಮಿ ಕ್ರೀಡಾಂಗಣದಲ್ಲಿಂದು ನಡೆಯಲಿರ
ೇೇ


ಮುಂಬೈ,21 ಮಾರ್ಚ್ (ಹಿ.ಸ):

ಆ್ಯಂಕರ್

ನವಿಮುಂಬೈಯ ಡಾ. ಡಿ ವೈ ಪಾಟೀಲ್ ಕ್ರೀಡಾ ಅಕಾಡೆಮಿ ಕ್ರೀಡಾಂಗಣದಲ್ಲಿಂದು ನಡೆಯಲಿರುವ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿವೆ. ಪಂದ್ಯ ೩. ೩೦ಕ್ಕೆ ಆರಂಭವಾಗಲಿದೆ. ಮುಂಬೈಯ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸಂಜೆ ೭.೩೦ಕ್ಕೆ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಸೆಣಸಲಿದೆ. ನಿನ್ನೆ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜಯಂಟ್ಸ್ ತಂಡವನ್ನು ೩ ವಿಕೆಟ್ಗಳಿಂದ ಮಣಿಸಿದೆ.

ನವಿಮುಂಬೈಯ ಡಾ. ಡಿ ವೈ ಪಾಟೀಲ್ ಕ್ರೀಡಾ ಅಕಾಡೆಮಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದೆದುರು ೯ ವಿಕೆಟ್ಗಳ ಅಮೋಘ ಜಯ ಸಾಧಿಸಿತು. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು. ಮುಂಬೈ ಇಂಡಿಯನ್ಸ್ ತಂಡ ನಿಗದಿತ ೨೦ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೦೯ ರನ್ ಗಳಿಸಲಷ್ಟೇ ಶಕ್ತವಾಯಿತು.

ಹಿಂದೂಸ್ತಾನ್ ಸಮಾಚಾರ್


 rajesh pande