ಇಂದಿನಿಂದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್
ನವದೆಹಲಿ, 16 ಮಾರ್ಚ್ (ಹಿ.ಸ): ಆ್ಯಂಕರ್ :13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ ಗುರುವಾರದಿಂದ ನವ
ೈೈ


ನವದೆಹಲಿ, 16 ಮಾರ್ಚ್ (ಹಿ.ಸ):

ಆ್ಯಂಕರ್ :13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ ಗುರುವಾರದಿಂದ ನವದೆಹಲಿಯಲ್ಲಿ ಆರಂಭವಾಗಲಿದ್ದು, 65 ದೇಶಗಳ 300ಕ್ಕೂ ಹೆಚ್ಚು ಬಾಕ್ಸರ್ಗಳು ಸ್ಪರ್ಧಿಸಲಿದ್ದಾರೆ. ಭಾರತದ 12 ಸ್ಪರ್ಧಿಗಳು ಕಣಕ್ಕಿಳಿಯಲಿದ್ದು, ಹಾಲಿ ಚಾಂಪಿಯನ್ ನಿಖಾತ್ ಜರೀನ್(50 ಕೆ.ಜಿ.), ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್(75 ಕೆ.ಜಿ.) ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಕಳೆದ ಆವೃತ್ತಿಯಲ್ಲಿ ಭಾರತ 1 ಚಿನ್ನ ಸೇರಿ 3 ಪದಕ ಗೆದ್ದಿತ್ತು. 2006ರಲ್ಲಿ ತವರಿನಲ್ಲೇ ನಡೆದಿದ್ದ ಚಾಂಪಿಯನ್ಶಿಪ್ನಲ್ಲಿ 4 ಚಿನ್ನ ಸೇರಿ 8 ಪದಕ ಗೆದ್ದಿದ್ದು ಭಾರತದ ಈವರೆಗಿನ ಶ್ರೇಷ್ಠ ಸಾಧನೆ. ಆ ದಾಖಲೆಯನ್ನು ಉತ್ತಮಗೊಳಿಸಲು ಭಾರತೀಯ ಬಾಕ್ಸರ್ಗಳು ಎದುರು ನೋಡುತ್ತಿದ್ದಾರೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಈ ಸಲ ಸ್ಪರ್ಧಿಸುತ್ತಿಲ್ಲ.

ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಬಾಕ್ಸರ್ಗಳಿಗೆ ತಲಾ 1 ಲಕ್ಷ ಅಮೆರಿಕನ್ ಡಾಲರ್(ಅಂದಾಜು 82.75 ಲಕ್ಷ ರು.) ಬಹುಮಾನ ಸಿಗಲಿದೆ. ಬೆಳ್ಳಿ ವಿಜೇತರಿಗೆ ತಲಾ 41.37 ಲಕ್ಷ, ಸೆಮಿಫೈನಲ್ನಲ್ಲಿ ಸೋತು ಕಂಚಿಗೆ ತೃಪ್ತಿಪಡುವ ಇಬ್ಬರೂ ಬಾಕ್ಸರ್ಗಳಿಗೆ ತಲಾ 20.68 ಲಕ್ಷ ರು. ಬಹುಮಾನ ಮೊತ್ತ ದೊರೆಯಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande