ಕೋಲಾರ ಗಡಿ ಭಾಗದಲ್ಲಿ ಕಾಡಾನೆಗಳ ದಾಳಿ, ರೈತರ ಬೆಳೆ ನಷ್ಟ
ಕೋಲಾರ,18.(ಹಿ.ಸ) (ಹಿ.ಸ) : ಜಿಲ್ಲೆಯ ಬಂಗಾರಪೇಟೆ ತಾಲ್ಲುಕಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ.
ಕೋಲಾರ ಗಡಿ ಭಾಗದಲ್ಲಿ ಕಾಡಾನೆಗಳ ದಾಳಿ, ರೈತರ ಬೆಳೆ ನಷ್ಟ


ಕೋಲಾರ,18.(ಹಿ.ಸ) (ಹಿ.ಸ) : ಜಿಲ್ಲೆಯ ಬಂಗಾರಪೇಟೆ ತಾಲ್ಲುಕಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ಶುಕ್ರವಾರ ತಡರಾತ್ರಿ ಬಂಗಾರಪೇಟೆ ತಾಲೂಕಿನ ಕದರಿನತ್ತ ಗ್ರಾಮದ ಬಳಿ ಆನೆಗಳು ದಾಳಿ ನಡೆಸಿವೆ. ಕಳೆದ ಒಂದು ವಾರದಿಂದ ಕದರಿನತ್ತ ಗ್ರಾಮದ ಸುತ್ತಮುತ್ತ ಮೂರು ಆನೆಗಳ ಬೀಡು ಬಿಟ್ಟಿವೆ. ರೈತ ವೆಂಕೋಬರಾವ್ ಅವರ ಜಮೀನಿನ ಮೇಲೆ ಆನೆಗಳ ದಾಳಿ ನಡೆಸಿ ಬೆಳೆ ನಾಶ ಮಾಡಿದೆ. ಆನೆಗಳ ದಾಳಿಯಿಂದ ೨ ಎಕರೆ ಭತ್ತ, ೧ ಎಕರೆ ರಾಗಿ ನಾಶವಾಗಿದೆ.

ತಮಿಳುನಾಡು ಗಡಿಯಿಂದ ಆಗಮಿಸುವ ಆನೆಗಳ ಹಿಂಡು ಸತತವಾಗಿ ಬಂಗಾರಪೇಟೆ ತಾಲ್ಲುಕಿನ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳ ಆಸುಪಾಸಿನಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ಆನೆಗಳ ದಾಳಿಗೆ ರೈತನೊಬ್ಬ ಮೃತಪಟ್ಟಿದ್ದಾನೆ. ಇದುವರೆಗೂ ಆನೆಗಳ ದಾಳಿಯಿಂದ ಸುಮಾರು ೧೦ ಮಂದಿ ರೈತರು ಮೃತಪಟ್ಟಿದ್ಧಾರೆ. ಅಪಾರವಾದ ಬೆಳೆ ನಾಶವಗಿದೆ.

ಆನೇಗಳ ದಾಳಿ ತಡೆಯಲು ಸೋಲಾರ್ ಫೆನ್ಸಿಂಗ್ ನಿರ್ಮಿಸುವಂತೆ, ಅಲ್ಲದೆ ಬೆಳೆ ನಾಶಕ್ಕೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.


 rajesh pande