Custom Heading

ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ
ಗದಗ, ಸೆ.16(ಹಿ ಸ) : ಗದಗ ಜಿಲ್ಲೆಯ ಬಳಗಾನೂರು ಆರೋಗ್ಯ ಕ್ಷೇಮ ಕೇಂದ್ರ ವತಿಯಿಂದ ಗ್ರಾಮದಲ್ಲಿ ಪಿಟ್ ಇಂಡಿಯಾ ಸ್ವತಂತ್
ಗದಗ ಜಿಲ್ಲೆಯ ಬಳಗಾನೂರ ಗ್ರಾಮದಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ  ಜರುಗಿತು.


ಗದಗ, ಸೆ.16(ಹಿ ಸ) : ಗದಗ ಜಿಲ್ಲೆಯ ಬಳಗಾನೂರು ಆರೋಗ್ಯ ಕ್ಷೇಮ ಕೇಂದ್ರ ವತಿಯಿಂದ ಗ್ರಾಮದಲ್ಲಿ ಪಿಟ್ ಇಂಡಿಯಾ ಸ್ವತಂತ್ರ್ಯ ಓಟ ಕಾರ್ಯಕ್ರಮ ಜರುಗಿತು.

ಕದಡಿ ಗ್ರಾ.ಪಂ ಅಧ್ಯಕ್ಷ ಕೃಷ್ಣಪ್ಪ ಪಡೆಸೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಸುಜಾತ. ಜಿ ಮಾತನಾಡಿ, ಅಸಂಕ್ರಾಮಿಕ ಕಾಯಿಲೆ ತಡೆಗಟ್ಟುವ ಕುರಿತು ಜನರಿಗೆ ಮಾಹಿತಿ ನೀಡಿದರು. ಡಾ.ಶ್ವೇತಾ ಶಿಂಧೆ ಗ್ರಾಮಸ್ಥರಿಗೆ ಯೋಗದ ಮಹತ್ವ ತಿಳಿಸಿದರು.

ಸಮುದಾಯ ಆರೋಗ್ಯಧಿಕಾರಿ ಅಲೆಕ್ಸ ರೋಣದ, ನಂದಾ, ಪುಥಳಿಕರ್ ಆದಣ್ಣವರ ಅಸಂಕ್ರಾಮಿಕ ರೋಗಗಳ ತಪಾಸಣೆ ಮಾಡಿದರು. ಗ್ರಾಮಪಂಚಾಯತ್ಉಪಾಧ್ಯಕ್ಷೆ ಶಾಂತಾ ಶಟವಾಜಿ, ಪಿಡಿಓ ಅಶ್ವಿನಿ ಕುರುಡಗಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದುಸ್ತಾನ್ ಸಮಾಚಾರ/ಎಸಕೆ/ಎಂವೈ


 rajesh pande