ಕೆಂಗಲ್ ವಿಜಯಲಕ್ಷ್ಮಿ ತಿಮ್ಮಯ್ಯ ನಿಧನ
ಬೆಂಗಳೂರು, 05 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಹಿರಿಯ ಪುತ್ರಿ ಕೆಂಗಲ್ ವಿಜಯಲಕ್ಷ್ಮಿ ತಿಮ್ಮಯ್ಯ (88) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ. ಅವರಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರ
ಕೆಂಗಲ್ ವಿಜಯಲಕ್ಷ್ಮಿ ತಿಮ್ಮಯ್ಯ ಸಂಗ್ರಹ ಚಿತ್ರ


ಬೆಂಗಳೂರು, 05 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಹಿರಿಯ ಪುತ್ರಿ ಕೆಂಗಲ್ ವಿಜಯಲಕ್ಷ್ಮಿ ತಿಮ್ಮಯ್ಯ (88) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.

ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ. ಅವರಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಣಜಿ ಟ್ರೋಫಿ ಕ್ರಿಕೆಟಿಗ ಕೆಂಗಲ್ ಶ್ರೀಪಾದ ರೇಣು ಕೂಡ ಸೇರಿದ್ದಾರೆ.

ವಿಜಯಲಕ್ಷ್ಮಿ ತಿಮ್ಮಯ್ಯ ಅವರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ 5 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande