ಎಫ್.ಕೆ.ಸಿ.ಸಿ.ಐ ನಿರ್ದೇಶಕರಾಗಿ ಕೋಲಾರ ಉದ್ಯಮಿ ಎಸ್. ನಾಗಶೇಖರ್ ಆಯ್ಕೆ
ಎಫ್.ಕೆ.ಸಿ.ಸಿ.ಐ ನಿರ್ದೇಶಕರಾಗಿ ಕೋಲಾರದ ಉದ್ಯಮಿ ಎಸ್. ನಾಗಶೇಖರ್ ಆಯ್ಕೆ
ಉದ್ಯಮಿ ಎಸ್.ನಾಗಶೇಖರ್


ಕೋಲಾರ, 29 ಸೆಪ್ಟೆಂಬರ್ (ಹಿ.ಸ):

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಕೇಂದ್ರ ಕಚೇರಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಲಾರದ ಉದ್ಯಮಿ ಎಸ್. ನಾಗಶೇಖರ್ ಅವರು ೨೦೨೬-೨೭ನೇ ಸಾಲಿನ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಎಸ್. ನಾಗಶೇಖರ್ ಅವರ ಕಾರ್ಯವ್ಯಾಪ್ತಿಯು ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳನ್ನು ಒಳಗೊಂಡಿದೆ. ಈ ಐದು ಜಿಲ್ಲೆಗಳ ಉದ್ಯಮಿಗಳು, ವರ್ತಕರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಸೇವೆ ಸಲ್ಲಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ.

ಕೋಲಾರ ತಾಲ್ಲೂಕಿನ ಕೋಡಿಕಣ್ಣೂರು ಗ್ರಾಮದ ನಿವಾಸಿಯಾಗಿರುವ ಎಸ್. ನಾಗಶೇಖರ್ ಅವರು ಇದೇ ಮೊದಲ ಬಾರಿಗೆ ಎಫ್.ಕೆ.ಸಿ.ಸಿ.ಐ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಕೋಲಾರ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಾಗಶೇಖರ್ ಅವರ ಈ ಮಹತ್ವದ ಸಾಧನೆಗೆ ಕೋಲಾರದ ಉದ್ಯಮಿ ಜನಾರ್ದನ, ಸ್ವಾತಿ ಲ್ಯಾಬ್ನ ಜನಾರ್ದನ, ಕೋಲಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರು ಹಾಗೂ ಬೆಂಗಳೂರು ಗ್ರಾಮಾಂತರ ವಲಯದ ಉಪಾಧ್ಯಕ್ಷ ಡಾ. ಪಿ. ರಾಜಕುಮಾರ್, ರಮೇಶ್, ನಾಗರಾಜ್, ಕೆ ರಾಮನಾಥ, ಉಪಾಧ್ಯಕ್ಷರು ಕೋಲಾರ, ಎಂ ಎನ್ ರಾಮಚಂದ್ರ ಗೌಡ, ಕಾರ್ಯದರ್ಶಿ, ಕೋಲಾರ, ಮಂಜುನಾಥ ಮತ್ತು ಇತರ ಕೋಲಾರ ಜಿಲ್ಲಾ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande