



ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.)
ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ತಿಳಿದು ಅಥವಾ ತಿಳಿಯದೆಯೋ ಏನೋ ತಪ್ಪು ಮಾಡಿ ಬಂದಿದ್ದಾರೆ ಪದೇಪದೇ ಅದೇ ತಪ್ಪು ಮಾಡದೆ ಮಾಡಿದ ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು, ನಮ್ಮ ಚಿಂತೆಗಳನ್ನು ಕಳೆಯಬೇಕಾದರೆ ಅದಕ್ಕೆ ಮುಖ್ಯ ಸಂಗೀತ ಅಂತಹ ಸಂಗೀತ ಕಾರ್ಯಕ್ರಮವನ್ನು ಆಲಾಪ್ ಸಂಗೀತ ಕಲಾ ಟ್ರಸ್ಟ್ ನವರು ಈ ಕಾರಗೃಹದಲ್ಲಿ ಆಯೋಜಿಸಿರುವುದು ತುಂಬಾ ಶ್ಲಾಘನೀಯ ಎಂದು ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಎಚ್ ಲಕ್ಷ್ಮಿಕಾಂತ್ ರೆಡ್ಡಿ ಹೇಳಿದರು.
ಅವರು ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಕೇಂದ್ರ ಕಾರಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಸಂಗಮ ಸಾಂಸ್ಕೃತಿಕ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಡೇಶ್ ಎಮ್ಮಿಗನೂರು ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆಯು ಸುಮಾರು 10 ವರ್ಷಗಳಿಂದ ಬಳ್ಳಾರಿಯಲ್ಲದೆ ಇನ್ನು ಬೇರೆ ಬೇರೆ ಕಡೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದೇವೆ ಅದೇ ರೀತಿಯಾಗಿ ಈ ಕಾರಾಗೃಹದಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಿದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ವಿ.ಕೃಷ್ಣಮೂರ್ತಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಏಕೆಂದರೆ ಚಿಂತೆ ಮತ್ತು ಖಿನ್ನತೆಯಲ್ಲಿರುವ ಕೈದಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಅದರಲ್ಲಿ ಮುಖ್ಯವಾಗಿ ಸಂಗೀತದಿಂದ ಮನಸ್ಸು ಹಗುರವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾರಾನಾಥ ಆಯುರ್ವೇದ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ. ಎಸ್ ಎಂ ಕೊಟ್ರೇಶ್ ರವರು ಸರ್ವರೋಗಕ್ಕೂ ಸಂಗೀತ ಮದ್ದು ಹಾಗಾಗಿ ಸಂಗೀತ ಆಲಿಸುವುದರಿಂದ ನಮ್ಮ ಚಿಂತೆಗಳು ದೂರವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಅಧಿಕ್ಷಕರಾದ ವಿ.ಕೃಷ್ಣಮೂರ್ತಿ ಆಲಾಪ್ ಸಂಗೀತ ಕಲಾ ಟ್ರಸ್ಟ್ ನವರು ರಂಗಗೀತೆ, ವಚನ ಗಾಯನ, ಜಾನಪದ ಗೀತೆಗಳು ಕಾರ್ಯಕ್ರಮವನ್ನು ಆಯೋಜಿಸಿರುವುದು ಕೈದಿಗಳಿಗೆ ಮನೋರಂಜನೆ ಜೊತೆ ಜೊತೆಗೆ ತಮ್ಮ ಕಷ್ಟಗಳನ್ನು ಮರೆಯಲು ಸಹಕಾರಿಯಾಗಿವೆ ಎಂದರು ಕೈದಿಗಳು ತಾವು ಮಾಡಿರುವ ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಉತ್ತಮ ಸತ್ಪ್ರಜೆಗಳಾಗಿ ಬಾಳಬೇಕೆಂದು ಕೈದಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಶ್ರೀ ತಿಮ್ಮಣ್ಣ ಬಿ ಭಜಂತ್ರಿ ರವರು ಹಾಗೂ ಹಿರಿಯ ಕನ್ನಡಪರ ಹೋರಾಟಗಾರರಾದ ಕಪ್ಪಗಲ್ ಬಿ. ಚಂದ್ರಶೇಖರ್ ಆಚಾರ್ ರವರು ರಾಘವ ಮೆಮೋರಿಯಲ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಪಿ.ಎಂ. ನಟ ರಾಜ್ ಹರೀಶ್ ಶೆಟ್ಟಿ
ವೇದಿಕೆ ಮೇಲೆ ಉಪಸ್ಥಿತರಿದ್ದರು. ತದನಂತರ ರಂಗಭೂಮಿ ಕಲಾವಿದರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆದೋನಿ ಮತ್ತು ತಂಡದಿಂದ ರಂಗಗೀತೆಗಳು ಹಾಗೂ ಜಡೇಶ್ ಎಮ್ಮಿಗನೂರು ಮತ್ತು ತಂಡದಿಂದ ವಚನ ಗಾಯನ ಹಾಗೂ ಮರಿಯಮ್ಮನಳ್ಳಿಯ ಹೆಸರಾಂತ ಜಾನಪದ ಕಲಾವಿದರಾದ ಮಹಂತೇಶ್ ತಂಡದಿಂದ ಜಾನಪದ ಗೀತೆಗಳ ಕಾರ್ಯಕ್ರಮ ನೆರೆದಿದ್ದ ಕೈದಿಗಳ ಮನ ಸಂತೋಷ ಪಡಿಸುವುದಲ್ಲದೆ ಶಿಳ್ಳೆ ಕೇಕೆಗಳಿಂದ ಸಂತೋಷ ಪಟ್ಟರು ನಂತರ ಬಂದಿ ಕೈದಿಯಾದ ಹನುಮಂತ ರವರು ತಮ್ಮ ಅನಿಸಿಕೆಯಲ್ಲಿ ನಮ್ಮ ಕಾರಾಗೃಹದ ಅಧೀಕ್ಷಕರಾದ ಕೃಷ್ಣಮೂರ್ತಿ, ಬಂದಾಗಿನಿಂದ ನಮಗೆ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ ಅವರು ಬಂದಾಗಿನಿಂದ ನಮ್ಮ ಮನೆಯ ಯಜಮಾನನಾಗಿ ನಮಗೆ ಸ್ಪಂದಿಸುತ್ತಿದ್ದಾರೆ ಜೊತೆಗೆ ನಮಗೆ ಇದು ಕಾರಾಗೃಹ ಎನಿಸದೆ ನಾವು ನಮ್ಮ ಮನೆಯಲ್ಲಿದ್ದೇವೆ ಎನ್ನುವ ಅನುಭವವಾಗುತ್ತಿದೆ ಈ ದಿನ ಆಲಾಪ್ ಸಂಗೀತ ಕಲಾ ಟ್ರಸ್ಟ್ ನವರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳ್ಳಿ ಸೊಗಡಿನ ಜಾನಪದ ಗೀತೆಗಳು, ರಂಗ ಗೀತೆಗಳು ಇಷ್ಟವಾದವು ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್