
ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.):
ಬಳ್ಳಾರಿ ತಾಲೂಕಿನ ಶಿಡಿಗಿನಮೊಳ ಗ್ರಾಮದ ಎ-ಒನ್ ಸ್ಟೀಲ್ಸ್ ಕಾರ್ಖಾನೆಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ ಅಶೋಕ್ ಕುಮಾರ್ ಎಂಬ 54 ವರ್ಷದ ವ್ಯಕ್ತಿ (ಮೂಲ ನಿವಾಸ: ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ ರಾಜ್ ಜಿಲ್ಲೆಯ ದುಮ್ ದುಮಾ ಗ್ರಾಮ) ಜುಲೈ 13 ರಂದು ಗ್ರಾಮಕ್ಕೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ಇಲ್ಲಿಯವರೆಗೆ ತಮ್ಮ ಗ್ರಾಮಕ್ಕೆ ಹೋಗದೇ ಹಾಗೂ ಪುನ: ಹಾಲಿ ನಿವಾಸಕ್ಕೆ ಬಾರದೇ ಕಾಣೆಯಾಗಿರುವ ಕುರಿತು ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ:
ಎತ್ತರ 5.5 ಅಡಿ, ಗೋದಿ ಮೈಬಣ್ಣ, ಗೋಲು ಮುಖ, ತೆಳ್ಳನೆಯ ಮೈಕಟ್ಟು ಹೊಂದಿರುತ್ತಾನೆ. ಮನೆಯಿಂದ ಹೊರಡುವಾಗ ಕಪ್ಪು ಗೆರೆಗಳುಳ್ಳ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯ ದೂ.08392-276461, 08392-265010, ಮೊ.9480803052 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್