ಉಚಿತ ಜೈಪುರ ಕೃತಕ ಅಂಗ ಜೋಡಣಾ ಶಿಬಿರ
ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.): ಬೆಂಗಳೂರಿನ ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಸಂಸ್ಥೆಯು 10ನೇ ಉಚಿತ ಮೆಗಾ ಕೃತಕ ಅಂಗಗಳ ಜೋಡಣಾ (ಜೈಪುರ ಪಾದ) ಶಿಬಿರವನ್ನು ಅಕ್ಟೋಬರ್ 2 ರಿಂದ 4 ರ ವರೆಗೆ ಏರ್ಪಡಿಸಿದೆ. ಬೆಂಗಳೂರಿನ ಶಂಕರಪುರಂನ ಪಂಪ ಮಹಾಕವಿ ರಸ್ತೆಯ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್
ಜೈಪುರ ಕೃತಕ ಅಂಗ ಜೋಡಣಾ ಮೇಳ


ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.):

ಬೆಂಗಳೂರಿನ ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಸಂಸ್ಥೆಯು 10ನೇ ಉಚಿತ ಮೆಗಾ ಕೃತಕ ಅಂಗಗಳ ಜೋಡಣಾ (ಜೈಪುರ ಪಾದ) ಶಿಬಿರವನ್ನು ಅಕ್ಟೋಬರ್ 2 ರಿಂದ 4 ರ ವರೆಗೆ ಏರ್ಪಡಿಸಿದೆ.

ಬೆಂಗಳೂರಿನ ಶಂಕರಪುರಂನ ಪಂಪ ಮಹಾಕವಿ ರಸ್ತೆಯ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಈ ಶಿಬಿರ ನಡೆಯಲಿದೆ. ಶಿಬಿರವು ಅಕ್ಟೋಬರ್ 02ನೇ ತಾರೀಕಿನಿಂದ 04ನೇ ಅಕ್ಟೋಬರ್ 2026 ವರೆಗೆ ಇರುತ್ತದೆ.

ಆಸಕ್ತರು, ನೋಂದಣಿಗಾಗಿ ಸತ್ಯಂದ್ರ ಸಾಹೂ, ಮೊಬೈಲ್ ಸಂಖ್ಯೆ :- 7005852343, ಶಂಕರ್ ಅಗರ್ವಾಲ್, ಮೊಬೈಲ್ ಸಂಖ್ಯೆ : 9342069904, ಅನುರಾಧ ಭಟ್, ಮೊಬೈಲ್ ಸಂಖ್ಯೆ : 7676975426, ಲಲನ ಕೃಷ್ಣಮೂರ್ತಿ, ಮೊಬೈಲ್ ಸಂಖ್ಯೆ : 9880844757, ಮನೀಶ್ ಭೋಜವರ್, ಮೊಬೈಲ್ ಸಂಖ್ಯೆ : 9071207574 ಗೆ ಸಂಪರ್ಕ ಮಾಡಲು ಕೋರಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande