
ಸಂಡೂರು, 29 ಸೆಪ್ಟೆಂಬರ್ (ಹಿ.ಸ.)
ಸಂಡೂರು ತಾಲೂಕಿನ ಉಬ್ಬಲಗುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಮೆ. ಮಿನೆರಾ ಸ್ಟೀಲ್ ಆಂಡ್ ಪವರ್ ಪ್ರೆವೇಟ್ ಲಿಮಿಟೆಡ್ ವತಿಯಿಂದ ಉದ್ದೇಶಿತ ಮಿನರಲ್ ಬೆನಿಫಿಸಿಯೇಷನ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕರೆಯಲಾಗಿದೆ.
ಉಬ್ಬಲಗುಂಡಿ ಗ್ರಾಮದ ಸರ್ವೇ ನಂ. 208, 210-1, 210-ಎ1, 210-ಎ2 ಹಾಗೂ 210-ಬಿ ವ್ಯಾಪ್ತಿಯ ಒಟ್ಟು 19.68 ಎಕರೆ (7.964 ಹೆಕ್ಟೇರ್) ಭೂ ಪರಿವರ್ತಿತ ಜಮೀನಿನಲ್ಲಿ ವಾರ್ಷಿಕ 0.49 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಕಂಪನಿಯು ಪ್ರಸ್ತಾವನೆ ಸಲ್ಲಿಸಿದೆ.
ಪರಿಸರ ಆಘಾತ ಅಧ್ಯಯನ ಅಧಿಸೂಚನೆ ಅನ್ವಯ ಈ ಯೋಜನೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಲಿಸಲು, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಯೋಜನೆ ಕೈಗೊಳ್ಳಲಿರುವ ಉಬ್ಬಲಗುಂಡಿ ಗ್ರಾಮದ ಯೋಜನಾ ಸ್ಥಳದಲ್ಲೇ ಸಾರ್ವಜನಿಕ ಆಲಿಕೆ ಸಭೆ ಆಯೋಜಿಸಲಾಗಿದೆ.
ಸಾರ್ವಜನಿಕರು ಹಾಗೂ ಆಸಕ್ತರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ, ಆಕ್ಷೇಪಣೆ ಅಥವಾ ಸಲಹೆಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್