ನಿರಂತರ ಪ್ರಯತ್ನ, ದೃಢ ಸಂಕಲ್ಪವೇ ಯಶಸ್ಸು ಮತ್ತು ನವೋದ್ಯಮದ ಮಾರ್ಗ: ಪ್ರಧಾನಿ ಮೋದಿ
ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಯಶಸ್ಸು, ನವೋದ್ಯಮ ಹಾಗೂ ದೃಢ ಸಂಕಲ್ಪಕ್ಕೆ ನಿರಂತರ ಪ್ರಯತ್ನ ಮತ್ತು ಸಮರ್ಪಿತ ಕಾರ್ಯ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಸಂಸ್ಕೃತದ ಶ್ಲೋಕವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ವ್ಯಕ್ತಿಯ ಪ್
प्रधानमंत्री नरेन्द्र मोदी (फाइल फोटो)


ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಯಶಸ್ಸು, ನವೋದ್ಯಮ ಹಾಗೂ ದೃಢ ಸಂಕಲ್ಪಕ್ಕೆ ನಿರಂತರ ಪ್ರಯತ್ನ ಮತ್ತು ಸಮರ್ಪಿತ ಕಾರ್ಯ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಸಂಸ್ಕೃತದ ಶ್ಲೋಕವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ವ್ಯಕ್ತಿಯ ಪ್ರಯತ್ನ ಮತ್ತು ಶ್ರಮ ಎಷ್ಟೇ ಹೆಚ್ಚಾಗುತ್ತದೆಯೋ ಅಷ್ಟೇ ವೇಗವಾಗಿ ಯಶಸ್ಸು ದೊರೆಯುತ್ತದೆ ಎಂಬ ಸಂದೇಶವನ್ನು ಸಾರಿದ್ದಾರೆ. ನವೋದ್ಯಮವೂ ನಿರಂತರ ಪ್ರಯತ್ನದ ಮೇಲೆ ಅವಲಂಬಿತವಾಗಿದೆ. ಅದೃಷ್ಟಕ್ಕಿಂತ ಸಮರ್ಪಿತ ಕಾರ್ಯ, ಧೈರ್ಯ ಹಾಗೂ ಹೊಸ ಆಲೋಚನೆಗಳನ್ನು ವಾಸ್ತವಕ್ಕೆ ಪರಿವರ್ತಿಸುವ ದೃಢ ಸಂಕಲ್ಪವೇ ಯಶಸ್ಸು ಮತ್ತು ನವೋದ್ಯಮಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದರು.

ರಾಷ್ಟ್ರಸೇವೆಯ ಸಹಯೋಗಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂಕಲ್ಪವನ್ನು ರಾಷ್ಟ್ರ ನಿರ್ಮಾಣದ ಆಧಾರವಾಗಿ ಪರಿಗಣಿಸಿದ್ದರು. ಅವರು ಪ್ರತಿಪಾದಿಸಿದ ಅಂತ್ಯೋದಯದ ತತ್ವ ಇಂದಿಗೂ ಜನಕಲ್ಯಾಣಕ್ಕೆ ಸ್ಫೂರ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ವಿಚಾರಗಳು ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ಮತ್ತು ರಾಷ್ಟ್ರೀಯ ಕಾರ್ಯಕ್ಕೆ ಸಮರ್ಪಿಸಿಕೊಳ್ಳುವ ಸಂಕಲ್ಪವನ್ನು ಈ ವಿಶೇಷ ಸಂದರ್ಭದಲ್ಲಿ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯಾದ ಸೆಪ್ಟೆಂಬರ್ 25ರಂದು ದೇಶಾದ್ಯಂತ ‘ಅಂತ್ಯೋದಯ ದಿನ’ವಾಗಿ ಆಚರಿಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande