




ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಅಖಿಲ ಭಾರತ ವೀರಶೈವ ಮಹಾಸಭೆ, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗಳ ಸಂಸ್ಥಾಪಕ ಮಹಾಗರು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತ್ಯೋತ್ಸವು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಗುರುವಾರ ಬೆಳಗ್ಗೆ ಷಟ್ಸ್ಥಲ ಧ್ವಜಾರೋಹಣದಿಂದ ಆರಂಭವಾಗಿದೆ.
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಮಠದಲ್ಲಿ ಷಟ್ಸ್ಥಲ ಧ್ವಜಾರೋಹಣ ನಡೆಯಿತು. ದರೂರಿನ ಶ್ರೀಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮಿಗಳು, ಕುರುಗೋಡು ಮತ್ತು ಗರಗ ನಾಗಲಾಪುರದ ವಿರಕ್ತಮಠದ ನಿರಂಜನಪ್ರಭು ಸ್ವಾಮಿಗಳು, ಸೋಮಸಮುದ್ರ ವಿರಕ್ತಮಠದ ಸಿದ್ದಲಿಂಗಸ್ವಾಮಿಗಳು, ಬೂದುಗುಂಪದ ವಿರುಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಮತ್ತು ಶ್ರೀಧರಗಡ್ಡೆಯ ವಿರಕ್ತಮಠದ ಮರಿಕೊಟ್ಟೂರು ದೇಶೀಕರು ಪಾಲ್ಗೊಂಡಿದ್ದರು.
ಪುರಾಣಕ್ಕೆ ಭಕ್ತಾಧಿಗಳು ಹಾಜರಾಗಲು ವೀರಶೈವ ವಿದ್ಯಾವರ್ಧಕ ಸಂಘವು ಬಳ್ಳಾರಿಯ ಬಸವೇಶ್ವರ ನಗರ, ಶ್ರೀಕನಕ ದುರ್ಗಮ್ಮ ಗುಡಿ, ಎಸ್ಪಿ ಸರ್ಕಲ್, ಮೋತಿ ಸರ್ಕಲ್, ಸೋಮಸಮುದ್ರ ಮತ್ತು ಶ್ರೀಧರಗಡ್ಡೆ ಗ್ರಾಮದಿಂದ ನಿತ್ಯವೂ ಉಚಿತವಾಗಿ ಬಸ್ ಸೌಲಭ್ಯಗಳನ್ನು ಒದಗಿಸಿದೆ. ಶ್ರೀಮಠದ ಭಕ್ತಾಧಿಗಳಿಗೆ ನಿತ್ಯವೂ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದು, ಭಕ್ತಾಧಿಗಳು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶ್ರೀಮಠ ಕೋರಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್