ವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ
ಬಳ್ಳಾರಿ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ವಚನ ಸಾಹಿತ್ಯವು ಮಾನವೀಯತೆಯ ಆಗರ ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಲೇಖಕ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ತಿಳಿಸಿದ್ದಾರೆ. ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಲಿಂಗೈಕ್
ವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ


ವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ


ವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ


ಬಳ್ಳಾರಿ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ವಚನ ಸಾಹಿತ್ಯವು ಮಾನವೀಯತೆಯ ಆಗರ ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಲೇಖಕ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ತಿಳಿಸಿದ್ದಾರೆ.

ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಲಿಂಗೈಕ್ಯ ಡಾ. ವೈ. ನಾಗೇಶ ಶಾಸ್ತ್ರಿಗಳ ದತ್ತಿ ಹಾಗೂ ಲಿಂ. ಕೆ.ಎಂ. ಗವಿಸಿದ್ದಯ್ಯ-ಸರೋಜಮ್ಮ ದತ್ತಿ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯವು ಸಮಾನತೆ, ಸಹಬಾಳ್ವೆ ಹಾಗೂ ಸಹಿಷ್ಣುತೆಯ ಮೌಲ್ಯಗಳನ್ನು ಸಾರುತ್ತದೆ. ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕೇ ಹೊರತು ಜಾತಿ, ಧರ್ಮ, ವರ್ಗ ಸೇರಿದಂತೆ ಯಾವುದೇ ಹಣೆಪಟ್ಟಿಗಳಿಂದ ನೋಡಬಾರದು. ಮಾತುಗಳಿಗಿಂತ ಮಾನವೀಯ ಕಳಕಳಿ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು.

`ವಚನ ಸಾಹಿತ್ಯದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ' ಕುರಿತು ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಉಪನ್ಯಾಸಕ ರಫೀಕ್ ಶಿಡಗಿನಮೊಳ ಅವರು, ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ, ಮತದಾನ ಅಥವಾ ಸರ್ಕಾರ ರಚನೆಯಲ್ಲ. ಪ್ರತಿಯೊಬ್ಬರೂ ಮನುಷ್ಯನಾಗಿ ಬದುಕುವ ಹಕ್ಕನ್ನು ನೀಡುವ ಜೀವನಮೌಲ್ಯ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಹೋದರತೆ, ಜನರ ಪಾಲ್ಗೊಳ್ಳುವಿಕೆ ಹಾಗೂ ಮಾನವ ಘನತೆ ಪ್ರಜಾಪ್ರಭುತ್ವದ ಮೂಲತತ್ತ್ವಗಳಾಗಿವೆ ಎಂದರು.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹೆಚ್. ವೀರಭದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ. ವೈ. ನಾಗೇಶ ಶಾಸ್ತ್ರಿಗಳ ಮೊಮ್ಮಗಳಾದ ಶ್ರೀಮತಿ ಡಿ. ನಾಗರತ್ನ, ಉದ್ಯಮಿ ಎಂ. ಚಂದ್ರಮೌಳಿ, ಸಮಾಜ ಸೇವಕರಾದ ಹಲಕುಂದಿ ಸತೀಶ್ ಕುಮಾರ್ ಹಾಗೂ ಕೇಣಿ ಬಸವರಾಜ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಆಲಂಭಾಷ ಅವರು ಸ್ವಾಗತಿಸಿದರು. ಅಧ್ಯಾಪಕರಾದ ಮಂಗಳಗೌರಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಶ್ವಿನಿ ಅವರು ವಂದನಾರ್ಪಣೆ ಸಲ್ಲಿಸಿದರು. ಗಣೇಶ್ ಡಿ.ಎಸ್. ಅವರು ಗೀತಗಾಯನ ನಡೆಸಿಕೊಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande