
ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 7 ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಜುವೆನೈಲ್ ಜಸ್ಟೀಸ್ (ಜೆ.ಜೆ.) ಕಾಯ್ದೆಯಡಿಯ ನೋಂದಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಕೈಬಿಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂಸ್ಥೆಗಳು ಕೇವಲ ವಸತಿಯುತ ಶಿಕ್ಷಣ ಒದಗಿಸುತ್ತಿದ್ದು, ಅಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಾತ್ರ ದಾಖಲಾಗಿದ್ದಾರೆ. ಜೆ.ಜೆ. ಕಾಯ್ದೆಯಡಿ ಬರುವ ‘ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು’ ಈ ಸಂಸ್ಥೆಗಳಲ್ಲಿ ಇಲ್ಲದಿರುವುದರಿಂದ, ಜೆ.ಜೆ. ಕಾಯ್ದೆಯಿಂದ ತಮ್ಮ ಸಂಸ್ಥೆಗಳನ್ನು ಕೈಬಿಡುವಂತೆ ಸಂಸ್ಥೆಯ ಮುಖ್ಯಸ್ಥರೇ ಪತ್ರ ಮುಖೇನ ಕೋರಿದ್ದರು. ಇದರ ಅನ್ವಯ ಕೇಂದ್ರ ಕಚೇರಿಯ ಆದೇಶದಂತೆ 7 ಸಂಸ್ಥೆಗಳನ್ನು ಜೆ.ಜೆ. ಕಾಯ್ದೆಯ ವ್ಯಾಪ್ತಿಯಿಂದ ರದ್ದುಗೊಳಿಸಲಾಗಿದೆ.
*ನೋಂದಣಿ ರದ್ದುಗೊಂಡ ಸಂಸ್ಥೆಗಳು:*
ಡಾ. ಭೀಮ ವಿದ್ಯಾ ಸಂಸ್ಥೆ, ಜ್ಞಾನೋದಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ಸಿಂಧನೂರು ರಸ್ತೆ, ಸಿರುಗುಪ್ಪ.
ಸಿ.ಎಸ್.ಐ. ಗರ್ಲ್ಸ್ ಹೋಮ್, ಎಸ್.ಎನ್. ಪೇಟೆ, ಬಳ್ಳಾರಿ.
ವಿಜಯಲಕ್ಷಿ ಯುವತಿ ಮಂಡಳಿ, ಕಪ್ಪಗಲ್ ರಸ್ತೆ, ಬಳ್ಳಾರಿ.
ನವಜೀವನ ಅಂಗವಿಕಲರ ಪುನಶ್ಚೇತನ ಕೇಂದ್ರ, ಇಂದಿರಾನಗರ, ಬಳ್ಳಾರಿ.
ಚೆಂಗಾರೆಡ್ಡಿ ಬುದ್ಧಿಮಾಂದ್ಯ ವಸತಿ ಶಾಲೆ, ಬೆಳಗಲ್ಲು ರಸ್ತೆ, ಬಳ್ಳಾರಿ.
ಬಿ.ಡಿ.ಡಿ.ಎಸ್. ಸಂಸ್ಥೆ, ಸುಧಾ ಕ್ರಾಸ್, ಬಳ್ಳಾರಿ.
ರೆಹಬೂತ್ ಮಕ್ಕಳ ವಸತಿ ನಿಲಯ, ತಾರಾನಾಥ ಆಸ್ಪತ್ರೆ ಹತ್ತಿರ, ಬಳ್ಳಾರಿ.
ಈ ಮೇಲ್ಕಂಡ ಸಂಸ್ಥೆಗಳು ಇನ್ನು ಮುಂದೆ ಜೆ.ಜೆ. ಕಾಯ್ದೆಯಡಿ ಮಕ್ಕಳ ಪಾಲನಾ ಸಂಸ್ಥೆಗಳಾಗಿ ಮುಂದುವರಿಯುವುದಿಲ್ಲವಾದ್ದರಿ0ದ, ಸಾರ್ವಜನಿಕರು ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಈ ಸಂಸ್ಥೆಗಳಿಗೆ ದಾಖಲಿಸಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್