ವಿಶ್ವಕರ್ಮ ಜಯಂತಿ: ದೇಶದ ಶಿಲ್ಪಿಗಳು, ಕುಶಲಕರ್ಮಿಗಳಿಗೆ ಪ್ರಧಾನಿ ಮೋದಿ ಶುಭಾಶಯ
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶದ ಜನತೆಗೆ ಶುಭಾಶಯ ಕೋರಿದರು. ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ದೇಶದ ಶಿಲ್ಪಿಗಳು ಹಾಗೂ ಕುಶಲಕರ್ಮಿಗಳನ್ನು ವಿಶೇಷವಾಗಿ ಅಭಿನಂದಿಸಿದ ಅವರು, ಅವರ ಕೌಶಲ್ಯ ಮತ್ತು ಪರಿಶ್ರಮವು
प्रधानमंत्री नरेन्द्र मोदी


ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶದ ಜನತೆಗೆ ಶುಭಾಶಯ ಕೋರಿದರು. ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ದೇಶದ ಶಿಲ್ಪಿಗಳು ಹಾಗೂ ಕುಶಲಕರ್ಮಿಗಳನ್ನು ವಿಶೇಷವಾಗಿ ಅಭಿನಂದಿಸಿದ ಅವರು, ಅವರ ಕೌಶಲ್ಯ ಮತ್ತು ಪರಿಶ್ರಮವು ಅಭಿವೃದ್ಧಿ ಹೊಂದಿದ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇವಶಿಲ್ಪಿ ಭಗವಾನ್ ವಿಶ್ವಕರ್ಮನಿಗೆ ಸಂಬಂಧಿಸಿದ ಈ ಪವಿತ್ರ ಸಂದರ್ಭದಲ್ಲಿ ದೇಶದಾದ್ಯಂತ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಶಿಲ್ಪಿಗಳು ಮತ್ತು ಕುಶಲಕರ್ಮಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ದೇಶದ ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ಶಿಲ್ಪಿಗಳ ಕೌಶಲ್ಯ ಮತ್ತು ಪರಿಶ್ರಮ ಮಹತ್ವದ ಕೊಡುಗೆ ನೀಡುತ್ತಿದೆ. ರಾಷ್ಟ್ರದ ನವ ನಿರ್ಮಾಣದ ದಿಸೆಯಲ್ಲಿ ಅವರ ಪ್ರಯತ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ದೊರೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಸಂದರ್ಭದಲ್ಲಿ ಭಗವಾನ್ ವಿಶ್ವಕರ್ಮನ ಮಹಿಮೆಯನ್ನು ಸಾರುವ “ಅನಾದಿರಪ್ರಮೇಯಶ್ಚ ಅರूपಶ್ಚ ಜಯಾಜಯಃ। ಲೋಕ ರೂಪೋ ಜಗನ್ನಾಥಃ ವಿಶ್ವಕರ್ಮನ್ನಮೋ ನಮಃ॥” ಎಂಬ ಸುಭಾಷಿತವನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ.

ಈ ಸುಭಾಷಿತದಲ್ಲಿ ಭಗವಾನ್ ವಿಶ್ವಕರ್ಮನು ಆದಿ-ಅನಾದಿ, ಅಸೀಮ ಹಾಗೂ ಅಪ್ರಮೇಯನಾಗಿದ್ದು, ನಿರ್ದಿಷ್ಟ ರೂಪವಿಲ್ಲದವನು ಮತ್ತು ಜಯ-ಪರಾಜಯಗಳನ್ನು ಮೀರಿದವನು. ಸಂಪೂರ್ಣ ಜಗತ್ತಿನ ಸ್ವರೂಪ ಹಾಗೂ ಜಗತ್ತಿನ ಒಡೆಯನಾಗಿ ನೆಲೆಸಿರುವ ಭಗವಾನ್ ವಿಶ್ವಕರ್ಮನಿಗೆ ಪುನಃ ಪುನಃ ನಮಸ್ಕಾರ ಎಂಬ ಅರ್ಥವನ್ನು ಹೊಂದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande