ನಿಜಾಮರ ದಬ್ಬಾಳಿಕೆಯ ಸಂಕೋಲೆ ಮುರಿದ ಐತಿಹಾಸಿಕ ದಿನ: ಡಿ.ಕೆ. ಶಿವಕುಮಾರ್
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ನಿಜಾಮರ ದಬ್ಬಾಳಿಕೆಯ ಸಂಕೋಲೆಗಳನ್ನು ಮುರಿದು ಕಲ್ಯಾಣ ನಾಡು ಸ್ವಾಭಿಮಾನದ ಹೊಸ ಉಸಿರೆಳೆದ ಐತಿಹಾಸಿಕ ದಿನವಿದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಎಕ್ಸ್‌ನಲ್ಲಿ ಸಂದೇಶ ನೀಡಿರುವ ಅವರು, ಅಸಂಖ್ಯ
ಮುಖ್ಯಮಂತ್ರಿ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ನಿಜಾಮರ ದಬ್ಬಾಳಿಕೆಯ ಸಂಕೋಲೆಗಳನ್ನು ಮುರಿದು ಕಲ್ಯಾಣ ನಾಡು ಸ್ವಾಭಿಮಾನದ ಹೊಸ ಉಸಿರೆಳೆದ ಐತಿಹಾಸಿಕ ದಿನವಿದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಎಕ್ಸ್‌ನಲ್ಲಿ ಸಂದೇಶ ನೀಡಿರುವ ಅವರು, ಅಸಂಖ್ಯಾತ ಹುತಾತ್ಮರ ಅಪ್ರತಿಮ ತ್ಯಾಗ ಮತ್ತು ಬಲಿದಾನಗಳ ಫಲವಾಗಿ ಅಂದು ಸ್ವಾತಂತ್ರ್ಯದ ಸೂರ್ಯೋದಯವಾಯಿತು ಎಂದು ಸ್ಮರಿಸಿದ್ದಾರೆ.

ಆ ವಿಮೋಚನೆಯ ಕಿಚ್ಚು ಇಂದು ಕಲ್ಯಾಣ ಕರ್ನಾಟಕದ ಸರ್ವಾಂಗೀಣ ವಿಕಾಸಕ್ಕೆ ಸ್ಫೂರ್ತಿಯಾಗಿದೆ. ಉತ್ತಮ ಶಿಕ್ಷಣ, ಸಮೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಇಲ್ಲಿನ ಜನರಿಗೆ ಒದಗಿಸುವ ಹಾದಿಯಲ್ಲಿ ಮುನ್ನಡೆಯುವ ದೃಢ ಸಂಕಲ್ಪದೊಂದಿಗೆ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande