ಹಣಕಾಸಿನ ವಿಚಾರಕ್ಕೆ ಮಹಿಳೆ ಕತ್ತು ಕೊಯ್ದು ಭೀಕರ ಕೊಲೆ;ಅರೋಪಿ ಬಂಧನ
ಮಹಿಳೆ ಕತ್ತು ಕೊಯ್ದು ಭೀಕರ ಕೊಲೆ
Belagavi Woman Murdered Over Financial Dispute, Accused Arrested in Kolhapur


ಬೆಳಗಾವಿ, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಹಣಕಾಸಿನ ವಿಚಾರಕ್ಕೆ ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಅನ್ನಪೂರ್ಣಾ ಎಂದು ಗುರುತಿಸಲಾಗಿದೆ.

ಅನ್ನಪೂರ್ಣಾ ಅವರಿಗೆ ಆರೋಪಿ ದಿಲೀಪ್ ಗಡಕರಿ ಎಂಬಾತನೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಪರಿಚಯವಿತ್ತು ಎನ್ನಲಾಗಿದೆ. ಜುಲೈ 23ರಂದು ಅನ್ನಪೂರ್ಣಾ ಮನೆಯಿಂದ ನಾಪತ್ತೆಯಾಗಿದ್ದರು.

ಅಂದು ಆರೋಪಿ ದಿಲೀಪ್, ಅನ್ನಪೂರ್ಣಾರನ್ನು ಗೋಕಾಕ್ ತಾಲೂಕಿನ ಸಿಂಗಳಾಪುರಕ್ಕೆ ಕರೆದೊಯ್ದು, ಅಲ್ಲಿನ ಕಬ್ಬಿನ ಗದ್ದೆಯಲ್ಲಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಮಹಿಳೆಯ ಬಳಿಯಿದ್ದ 37 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ.

ಬಂಧಿತನಿಂದ ಮೊಬೈಲ್ ಫೋನ್ ಹಾಗೂ 37 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕೌಜಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande