ಅರಾವಳಿ ವ್ಯಾಖ್ಯಾನ ಸಮಿತಿ ಅವಧಿ ವಿಸ್ತರಣೆಗೆ ವನವಾಸಿ ಕಲ್ಯಾಣ ಆಶ್ರಮ ಆಗ್ರಹ
ನವದೆಹಲಿ, 09 ಆಗಸ್ಟ್ (ಹಿ.ಸ.): ಆ್ಯಂಕರ್:ಅರಾವಳಿ ಪರ್ವತ ಶ್ರೇಣಿಯನ್ನು ವ್ಯಾಖ್ಯಾನಿಸಲು ರಚಿಸಲಾಗಿರುವ ಸಮಿತಿಯ ಕಾರ್ಯಾವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಬೇಕು ಎಂದು ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ ಆಗ್ರಹಿಸಿದೆ. ಸಮಗ್ರ ಹಾಗೂ ಅರ್ಥಪೂರ್ಣ ಸಮಾಲೋಚನೆ ನಡೆಸಲು ಪ್ರಸ್ತುತ ನೀಡಿರುವ 20 ದಿ
ಅರಾವಳಿ ವ್ಯಾಖ್ಯಾನ ಸಮಿತಿ ಅವಧಿ ವಿಸ್ತರಣೆಗೆ ವನವಾಸಿ ಕಲ್ಯಾಣ ಆಶ್ರಮ ಆಗ್ರಹ


ನವದೆಹಲಿ, 09 ಆಗಸ್ಟ್ (ಹಿ.ಸ.):

ಆ್ಯಂಕರ್:ಅರಾವಳಿ ಪರ್ವತ ಶ್ರೇಣಿಯನ್ನು ವ್ಯಾಖ್ಯಾನಿಸಲು ರಚಿಸಲಾಗಿರುವ ಸಮಿತಿಯ ಕಾರ್ಯಾವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಬೇಕು ಎಂದು ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ ಆಗ್ರಹಿಸಿದೆ.

ಸಮಗ್ರ ಹಾಗೂ ಅರ್ಥಪೂರ್ಣ ಸಮಾಲೋಚನೆ ನಡೆಸಲು ಪ್ರಸ್ತುತ ನೀಡಿರುವ 20 ದಿನಗಳ ಕಾಲಾವಕಾಶ ಸಾಕಾಗುವುದಿಲ್ಲ ಎಂದು ಸಂಘಟನೆ ತಿಳಿಸಿದೆ. ರಾಜಸ್ಥಾನ ಮತ್ತು ಗುಜರಾತ್‌ನ ಅರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಸಮುದಾಯಗಳು ವಾಸಿಸುತ್ತಿದ್ದು, ಈ ಪ್ರದೇಶಗಳು ಸಂವಿಧಾನದ ಐದನೇ ಅನುಸೂಚಿಗೆ ಒಳಪಡುತ್ತವೆ ಎಂದು ಹೇಳಿದೆ.

ಆ. 2ರಂದು ಸಮಿತಿ ಅಧ್ಯಕ್ಷರಿಗೆ ಸಲ್ಲಿಸಿರುವ ಪತ್ರದಲ್ಲಿ, ಸಮಿತಿಯು ಪರಿಣಾಮ ಬೀರುವ ಪ್ರದೇಶಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ. ಕ್ಷೇತ್ರ ಭೇಟಿಗಳ ಕುರಿತು ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಸಂಬಂಧಿತ ಗ್ರಾಮ ಪಂಚಾಯಿತಿಗಳಿಗೂ ಮಾಹಿತಿ ತಲುಪಿಸಬೇಕು ಎಂದು ಒತ್ತಾಯಿಸಿದೆ.

ಅಲ್ಲದೆ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು ಹಾಗೂ ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ನೀತಿ ವಿಚಾರಗಳಲ್ಲಿ ಸಂವಿಧಾನದ 338ಎ ವಿಧಿಯನ್ವಯ ಆಯೋಗದ ಸಲಹೆ ಪಡೆಯಬೇಕು ಎಂದು ಆಗ್ರಹಿಸಿದೆ. ಸಲಹೆಗಳನ್ನು ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್‌ನಲ್ಲಿ ಸಲ್ಲಿಸಲು ಅವಕಾಶ ನೀಡುವುದರ ಜೊತೆಗೆ ಅಂಚೆ ಮೂಲಕವೂ ಲಿಖಿತ ಸಲಹೆ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದೆ.

ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಸಮಿತಿಯನ್ನು ರಚಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande