ಭಾರತ–ಉಜ್ಬೇಕಿಸ್ತಾನ ದೀರ್ಘಕಾಲಿಕ ಯುರೇನಿಯಂ ಪೂರೈಕೆ ಒಪ್ಪಂದ ಐತಿಹಾಸಿಕ: ಬಿಜೆಪಿ
ನವದೆಹಲಿ, 31 ಆಗಸ್ಟ್ (ಹಿ.ಸ.): ಆ್ಯಂಕರ್:ಭಾರತ–ಉಜ್ಬೇಕಿಸ್ತಾನ ನಡುವಿನ ದೀರ್ಘಕಾಲಿಕ ಯುರೇನಿಯಂ ಪೂರೈಕೆ ಒಪ್ಪಂದವು ಭಾರತದ ಇಂಧನ ಭದ್ರತೆ, ಪರಮಾಣು ಸ್ವಾವಲಂಬನೆ ಹಾಗೂ ಭವಿಷ್ಯದ ಇಂಧನ ಅಗತ್ಯಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ
भाजपा सांसद सुधांशु त्रिवेदी


ನವದೆಹಲಿ, 31 ಆಗಸ್ಟ್ (ಹಿ.ಸ.):

ಆ್ಯಂಕರ್:ಭಾರತ–ಉಜ್ಬೇಕಿಸ್ತಾನ ನಡುವಿನ ದೀರ್ಘಕಾಲಿಕ ಯುರೇನಿಯಂ ಪೂರೈಕೆ ಒಪ್ಪಂದವು ಭಾರತದ ಇಂಧನ ಭದ್ರತೆ, ಪರಮಾಣು ಸ್ವಾವಲಂಬನೆ ಹಾಗೂ ಭವಿಷ್ಯದ ಇಂಧನ ಅಗತ್ಯಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಜ್ಬೇಕಿಸ್ತಾನ ಪ್ರವಾಸ ಹಾಗೂ ಒಪ್ಪಂದದ ಕುರಿತು ಸೋಮವಾರ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, ಈ ಒಪ್ಪಂದದಿಂದ ಭಾರತದ ಪರಮಾಣು ಇಂಧನ ಕಾರ್ಯಕ್ರಮಕ್ಕೆ ನಿರಂತರ ಇಂಧನ ಪೂರೈಕೆ ಸಾಧ್ಯವಾಗಲಿದೆ. ಇದರಿಂದ ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ನೆರವಾಗಲಿದೆ ಎಂದರು.

1966ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನೊಂದಿಗೆ ತಾಷ್ಕೆಂಟ್ ಹೆಸರು ದೇಶದ ನೆನಪಿನಲ್ಲಿ ಉಳಿದಿದೆ. ಸುಮಾರು ಆರು ದಶಕಗಳ ಬಳಿಕ ಇದೇ ತಾಷ್ಕೆಂಟ್‌ನಲ್ಲಿ ಭಾರತ ತನ್ನ ಇಂಧನ ಭದ್ರತೆಯನ್ನು ಬಲಪಡಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವುದು ವಿಶೇಷ ಎಂದು ತ್ರಿವೇದಿ ಹೇಳಿದರು.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸುತ್ತಿದೆ. ಈ ಒಪ್ಪಂದವು ಮುಂದಿನ ಹಲವು ದಶಕಗಳ ಇಂಧನ ಭದ್ರತೆಗೆ ಬಲ ನೀಡುವುದರ ಜೊತೆಗೆ ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದರು.

ಮೋದಿ ಅವರ ಪ್ರವಾಸ ವ್ಯಾಪಾರ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಉಜ್ಬೇಕಿಸ್ತಾನದ ತೇರ್ಮೆಜ್ ಪ್ರದೇಶದಲ್ಲಿರುವ ಪ್ರಾಚೀನ ಬೌದ್ಧ ಮಠದ ಸಂರಕ್ಷಣೆಯ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಹಿಸಿಕೊಂಡಿದೆ. ಅಲ್ಲದೆ, ತಾಷ್ಕೆಂಟ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪೀಠ ಸ್ಥಾಪಿಸಲು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಮುಂದಾಗಿದೆ ಎಂದು ತಿಳಿಸಿದರು.

ಇಂಡೋನೇಷ್ಯಾದ ಯೋಗ್ಯಕರ್ತಾದಲ್ಲಿರುವ ಪ್ರಮ್ಬಾನನ್ ದೇವಾಲಯದ ಸಂರಕ್ಷಣೆಯಿಂದ ಉಜ್ಬೇಕಿಸ್ತಾನದ ತೇರ್ಮೆಜ್‌ನ ಬೌದ್ಧ ಮಠದ ಸಂರಕ್ಷಣೆಯವರೆಗೆ, ಭಾರತ ತನ್ನ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಜಾಗತಿಕ ರಾಷ್ಟ್ರಗಳೊಂದಿಗೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುತ್ತಿದೆ ಎಂದು ತ್ರಿವೇದಿ ಹೇಳಿದರು

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande