ರಾಜ್ಯ ಆಹ್ವಾನಿತ ಫುಟ್ಬಾಲ್ ಟೂರ್ನಿ: ಹುಬ್ಬಳ್ಳಿ ತಂಡಗಳ ಪೈಪೋಟಿ
ಹುಬ್ಬಳ್ಳಿ, 29 ಆಗಸ್ಟ್ (ಹಿ.ಸ.): ಆ್ಯಂಕರ್:ಹುಬ್ಬಳ್ಳಿ‌ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಆಹ್ವಾನಿತ 11 ಆಟಗಾರರ ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ರೋಚಕ ಹಣಾಹಣಿ ನಡೆಯಿತು. ಮೊದಲ ಪಂದ್ಯದಲ್ಲಿ ಪರ್ಪಲ್ ಎಫ್.ಸಿ. ಹುಬ್ಬಳ್ಳಿ ತಂಡವು ಪ್ರವೀಣ್ ಎಫ್
ಪುಟ್ಬಾಲ್ ಟೂರ್ನಮೆಂಟ್


ಹುಬ್ಬಳ್ಳಿ, 29 ಆಗಸ್ಟ್ (ಹಿ.ಸ.):

ಆ್ಯಂಕರ್:ಹುಬ್ಬಳ್ಳಿ‌ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಆಹ್ವಾನಿತ 11 ಆಟಗಾರರ ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯಗಳಲ್ಲಿ ರೋಚಕ ಹಣಾಹಣಿ ನಡೆಯಿತು.

ಮೊದಲ ಪಂದ್ಯದಲ್ಲಿ ಪರ್ಪಲ್ ಎಫ್.ಸಿ. ಹುಬ್ಬಳ್ಳಿ ತಂಡವು ಪ್ರವೀಣ್ ಎಫ್.ಸಿ. ಹುಬ್ಬಳ್ಳಿ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ರಾಜೇಶ್ 3ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, ಸನ್ನಿ 17ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು. ಪರ್ಪಲ್ ಎಫ್.ಸಿ.ಯ ರಾಜೇಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಎರಡನೇ ಪಂದ್ಯದಲ್ಲಿ ಕರುನಾಡು ಎಫ್.ಸಿ. ದಾವಣಗೆರೆ ತಂಡವು ಮ್ಯಾಡ್ರಿಡ್ ಎಫ್.ಸಿ. ಹುಬ್ಬಳ್ಳಿ ವಿರುದ್ಧ ಟೈಬ್ರೇಕರ್‌ನಲ್ಲಿ 4-3ರಿಂದ ಜಯ ಸಾಧಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ದಾವಣಗೆರೆಯ ಅಯ್ಮಾನ್ ಅಲಿ ಪಂದ್ಯಶ್ರೇಷ್ಠರಾದರು.

ಮೂರನೇ ಪಂದ್ಯದಲ್ಲಿ ಮಿನಿಟ್ಸ್ ಮೇಡ್ ಎಫ್.ಸಿ. ಧಾರವಾಡ ತಂಡವು ಕಿಂಗ್ಸ್ ಯುನೈಟೆಡ್ ಎಫ್.ಸಿ. ಹುಬ್ಬಳ್ಳಿ ವಿರುದ್ಧ ಟೈಬ್ರೇಕರ್‌ನಲ್ಲಿ 3-2ರಿಂದ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ 1-1ರಿಂದ ಸಮಬಲಗೊಂಡಿತ್ತು. ಧಾರವಾಡ ತಂಡದ ಅಜಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ನಾಲ್ಕನೇ ಪಂದ್ಯದಲ್ಲಿ ಸಿ.ಆರ್.-7 ಎಫ್.ಸಿ. ಹುಬ್ಬಳ್ಳಿ ತಂಡವು ಶಾಹೀನ್ ಯುನೈಟೆಡ್ ಎಫ್.ಸಿ. ಹುಬ್ಬಳ್ಳಿ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಮಹಬೂಬ್ 3ನೇ ನಿಮಿಷದಲ್ಲೇ ನಿರ್ಣಾಯಕ ಗೋಲು ಬಾರಿಸಿದರು. ಅವರನ್ನೇ ಪಂದ್ಯಶ್ರೇಷ್ಠರಾಗಿ ಆಯ್ಕೆ ಮಾಡಲಾಯಿತು.

ಐದನೇ ಪಂದ್ಯದಲ್ಲಿ ಪರ್ಪಲ್ ಎಫ್.ಸಿ. ಹುಬ್ಬಳ್ಳಿ ತಂಡವು ಕಲಘಟಗಿ ಎಫ್.ಸಿ. ವಿರುದ್ಧ ಟೈಬ್ರೇಕರ್‌ನಲ್ಲಿ 4-3ರಿಂದ ಜಯಗಳಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ 2-2ರಿಂದ ಸಮಬಲಗೊಂಡಿತ್ತು. ಪರ್ಪಲ್ ಎಫ್.ಸಿ. ಪರ ಶೆಡ್ರಕ್ ಹಾಗೂ ರಾಜೇಶ್ ಗೋಲು ಗಳಿಸಿದರೆ, ಕಲಘಟಗಿ ಪರ ರಂಜನ್ ಎರಡು ಗೋಲು ದಾಖಲಿಸಿದರು. ಪರ್ಪಲ್ ಎಫ್.ಸಿ.ಯ ರಾಜಾ ರಾವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆ.28ರಿಂದ 30ರವರೆಗೆ ನಡೆಯುತ್ತಿರುವ ಈ ರಾಜ್ಯ ಆಹ್ವಾನಿತ ಫುಟ್ಬಾಲ್ ಟೂರ್ನಿಯಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದು, ಪಂದ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande