





ಬಳ್ಳಾರಿ, 27 ಆಗಸ್ಟ್ (ಹಿ.ಸ.)
ಆ್ಯಂಕರ್ : ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಅವರ 56ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಗರದ ವಿವಿಧೆಡೆಗಳಲ್ಲಿ ಸಿಹಿ ಹಂಚಿ, ಹಣ್ಣುಗಳನ್ನು ವಿತರಣೆ ಮಾಡಿ, ಬಟ್ಟೆಗಳನ್ನು ನೀಡುವ ಮೂಲಕ ಡಾ. ಸಯ್ಯದ್ ನಾಸೀರ್ ಹುಸೇನ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಗುರುವಾರ ಆಚರಿಸಿದ್ದಾರೆ.
ಡಾ. ಸಯ್ಯದ್ ನಾಸೀರ್ ಹುಸೇನ್ ಅವರು ಗುರುವಾರ ಬೆಳಗ್ಗೆ ಮಧರ್ ಥೆರೇಸಾ ನಿರಾಶ್ರಿತರ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿಯ ನಿವಾಸಿಗಳ ಜೊತೆಯಲ್ಲಿ ಕೆಲಹೊತ್ತು ಕಳೆದು ಅವರಿಗೆ ಸಿಹಿಯನ್ನು ಹಂಚಿ, ಬಟ್ಟೆಗಳನ್ನು ವಿತರಣೆ ಮಾಡಿ ತಮ್ಮ ಹುಟ್ಟು ಹಬ್ಬವನ್ನು ಕುಟುಂಬದ ಸದಸ್ಯರ ಜೊತೆಯಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿದ್ದಾರೆ.
ಆ ನಂತರ, ಶಾಂತಿ ಧಾಮದಲ್ಲಿ ಇರುವ ಸ್ತ್ರೀಸೇವಾ ನಿಕೇತನ, ಬಾಲಕಿಯರು ಮತ್ತು ಬಾಲಕರ ವಸತಿ ನಿಲಯಗಳು, ಬುದ್ಧಿಮಾಂದ್ಯರ ವಸತಿ ಶಾಲೆ, ಕಿವುಡ ಮತ್ತು ಮೂಗರ ಸರ್ಕಾರಿ ಶಾಲೆ, ದತ್ತು ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಯವರಿಗೆ ಸಿಹಿಯನ್ನು ಹಂಚಿ, ಹಣ್ಣುಗಳನ್ನು ನೀಡಿದರು.
ಅಲ್ಲದೇ, ರಾಜ್ಯಸಭಾ ಸದಸ್ಯರ ನಿಧಿಯಿಂದ ಶಾಂತಿ ಧಾಮದಲ್ಲಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ, ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ನೆರವೇರಿಸಲು ಗುತ್ತಿಗೆದಾರರು - ಅಧಿಕಾರಿಗಳಿಗೆ ತಿಳಿಸಿದರು.
ನಂದಿ ಶಾಲೆಯ ಬಳಿ ಇರುವ ಹಫೀಜ್ ಮುಕ್ತಾರ್ ಸಾಬ್ ಮದ್ರಾಸ ಸೇರಿ ವಿವಿಧೆಡೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್