

ಬಳ್ಳಾರಿ, 24 ಆಗಸ್ಟ್ (ಹಿ.ಸ.)
ಆ್ಯಂಕರ್: ಕೇಂದ್ರ ಸರ್ಕಾರವು ಮೇ, 22ರ 2026 ರಂದು ಪ್ರಕಟಿಸಿರುವ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣವೇ ಜಾರಿಗೊಳಿಸಿ, ಬಾಕಿ ವೇತನದ ವ್ಯತ್ಯಾಸವನ್ನು ಕಾರ್ಮಿಕರಿಗೆ ಪಾವತಿಸಲು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಸೆಪ್ಟೆಂಬರ್ 2 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಪ್ರತಿಭಟನೆ ನಡೆಸಲಿದೆ.
ಎಐಯುಟಿಯುಸಿಯ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್, ಜಿಲ್ಲಾ ಅಧ್ಯಕ್ಷರಾದ ಎ. ದೇವದಾಸ್, ಕಾರ್ಯದರ್ಶಿ ಡಾ. ಪ್ರಮೋದ್.ಎನ್, ಉಪಾಧ್ಯಕ್ಷರಾದ ಸೋಮಶೇಖರ ಗೌಡ, ಕಛೇರಿ ಕಾರ್ಯದರ್ಶಿ ಸುರೇಶ್, ಮುಖಂಡರಾದ ಮುರಳಿಕೃಷ್ಣ, ಚಿಟ್ಟೆಮ್ಮ, ಲಕ್ಷ್ಮಿ ಮುಂತಾದವರು ಈ ಕುರಿತು ಸುದ್ದಿಗಾರರಿಗೆ ಸೋಮವಾರ ವಿವರಿಸಿದರು.
ಉದ್ಯಮಪತಿಗಳಿಗೆ ಮಣಿದು ಕರ್ನಾಟಕ ಸರ್ಕಾರವು ಪರಿಷ್ಕøತ ಕನಿಷ್ಠ ವೇತನ ಜಾರಿಯನ್ನು ತಡೆದಿರುವ ಕ್ರಮವು ಕಾರ್ಮಿಕ ವಿರೋಧಿ ನೀತಿ. ಈ ಕಾಯ್ದೆಯ ಜಾರಿಯನ್ನು ತಡೆಯಲು ರಚಿಸಿರುವ ಸಂಚಿವ ಸಂಪುಟ ಸಮಿತಿಯನ್ನು ತಕ್ಷಣವೇ ರದ್ದು ಮಾಡಬೇಕು. ಬಾಕಿ ವೇತನ ವ್ಯತ್ಯಾಸವನ್ನು ಕಾರ್ಮಿಕರಿಗೆ ತಕ್ಷಣವೇ ಪಾವತಿಸಬೇಕು. ಕಾರ್ಮಿಕರ
ಹಕ್ಕುಗಳನ್ನು ರಕ್ಷಿಸಲು ಪರಿಷ್ಕೃತ ವೇತನದ ಸಂಪೂರ್ಣ ಜಾರಿಗಾಗಿ ಕಾರ್ಮಿಕರು `ಬೃಹತ್ ಹಾಗೂ ಸುದೀರ್ಘ ನಿರಂತರ ಹೋರಾಟ’ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪರಿಷ್ಕೃತ ವೇತನ ಜಾರಿಗೆ ಒತ್ತಾಯಿಸಿ ಸೆಪ್ಟೆಂಬರ್ 2 ರಿಂದ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ಆಹೋರಾತ್ರಿ ಪ್ರತಿಭಟನೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಹಸ್ರಾರು ಕಾರ್ಮಿಕರು ಮತ್ತು ನೌಕರರು ಈ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು. ಪ್ರತಿಭಟನೆಯ ಕುರಿತಾದ ಪೋಸ್ಟರ್ ಅನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್