ಬಿಲ್ ನಲ್ಲಿ ಗ್ರಾಹಕನ ದೇಹದ ಆಕಾರ, ಬಟ್ಟೆಯ ಬಣ್ಣ ಬಳಸಿ ನಿಂದನೆ: ಕೋರಮಂಗಲ ಕೆಫೆ ವಿರುದ್ಧ ಆಕ್ರೋಶ
ಬೆಂಗಳೂರು, 23 ಆಗಸ್ಟ್ (ಹಿ.ಸ.): ಆ್ಯಂಕರ್: ರಾಜಧಾನಿಯ ಕೋರಮಂಗಲದಲ್ಲಿರುವ ಪ್ರತಿಷ್ಠಿತ ಕೆಫೆಯೊಂದರಲ್ಲಿ ಗ್ರಾಹಕರೊಬ್ಬರನ್ನು ಬಿಲ್ನಲ್ಲಿ ದೇಹದ ಆಕಾರ ಹಾಗೂ ಬಟ್ಟೆಯ ಬಣ್ಣದ ಮೂಲಕ ಗುರುತಿಸಿ ನಿಂದಿಸಿರುವ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೋರಮಂಗಲದ ‘ಸಬ್ಕೊ ದಿ ಕ್ರಾಫ್ಟರಿ’ ಕೆಫೆಗೆ ತೆರಳಿ
Bengaluru Youth Body-Shamed on Cafe Coffee Bill,


ಬೆಂಗಳೂರು, 23 ಆಗಸ್ಟ್ (ಹಿ.ಸ.):

ಆ್ಯಂಕರ್:

ರಾಜಧಾನಿಯ ಕೋರಮಂಗಲದಲ್ಲಿರುವ ಪ್ರತಿಷ್ಠಿತ ಕೆಫೆಯೊಂದರಲ್ಲಿ ಗ್ರಾಹಕರೊಬ್ಬರನ್ನು ಬಿಲ್ನಲ್ಲಿ ದೇಹದ ಆಕಾರ ಹಾಗೂ ಬಟ್ಟೆಯ ಬಣ್ಣದ ಮೂಲಕ ಗುರುತಿಸಿ ನಿಂದಿಸಿರುವ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೋರಮಂಗಲದ ‘ಸಬ್ಕೊ ದಿ ಕ್ರಾಫ್ಟರಿ’ ಕೆಫೆಗೆ ತೆರಳಿದ್ದ ಯುವಕ ಆಹಾರ ಹಾಗೂ ಕಾಫಿ ಆರ್ಡರ್ ಮಾಡಿ ಬಿಲ್ ಪಾವತಿಸಿದ್ದರು. ಬಳಿಕ ರಶೀದಿಯನ್ನು ಗಮನಿಸಿದಾಗ, ‘ಗ್ರಾಹಕರ ವಿವರ’ ವಿಭಾಗದಲ್ಲಿ ಅವರ ಹೆಸರಿನ ಬದಲು ‘ಲಿಟಲ್ ಫ್ಯಾಟ್ ಬ್ಲ್ಯಾಕ್ ಶರ್ಟ್’ ಎಂದು ನಮೂದಿಸಿರುವುದು ಕಂಡುಬಂದಿದೆ.

ಇದರಿಂದ ಆಘಾತಕ್ಕೊಳಗಾದ ಗ್ರಾಹಕರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಫೆ ಸಿಬ್ಬಂದಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತನ್ನ ಹೆಸರಿನ ಬದಲು ದೇಹದ ಆಕಾರವನ್ನು ಆಧರಿಸಿ ಗುರುತಿಸಿರುವುದು ತಮಾಷೆಯಲ್ಲ. ಯಾರೋ ಒಬ್ಬರು ತನ್ನನ್ನು ದಪ್ಪ ಎಂದು ನಿರ್ಧರಿಸಿ ಅದನ್ನು ವ್ಯವಸ್ಥೆಯಲ್ಲಿ ದಾಖಲಿಸಿದ್ದಾರೆ’ ಎಂದು ಗ್ರಾಹಕರು ಆಕ್ಷೇಪಿಸಿದ್ದಾರೆ.

ಪುರುಷನಾಗಿದ್ದಾನೆ ಎಂಬ ಕಾರಣಕ್ಕೆ ದೇಹದ ಆಧಾರದ ಮೇಲೆ ಸಾರ್ವಜನಿಕವಾಗಿ ಅವಮಾನಿಸುವುದನ್ನು ಸಹಜವೆಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕೆಫೆ ಸಿಬ್ಬಂದಿಯ ವರ್ತನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande