ಬೆಸ್ಕಾಂನಿಂದ ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಬೆಂಬಲ
ಬೆಂಗಳೂರು, 23 ಆಗಸ್ಟ್ (ಹಿ.ಸ.): ಆ್ಯಂಕರ್:ವಾರಾಂತ್ಯದ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಬೆಸ್ಕಾಂ ವತಿಯಿಂದ ‘ಸ್ವಚ್ಛ ಬೆಂಗಳೂರು’ ಹಾಗೂ ‘ತ್ಯಾಜ್ಯ ಮುಕ್ತ ಬೆಂಗಳೂರು’ ಅಭಿಯಾನಕ್ಕೆ ಕೈಜೋಡಿಸಲಾಯಿತು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರ ಮಾರ್ಗದರ್ಶನದಲ್ಲಿ ರಾಜಾಜಿನಗರ 1ನೇ
ಸ್ವಚ್ಚತಾ ಅಭಿಯಾನ


ಬೆಂಗಳೂರು, 23 ಆಗಸ್ಟ್ (ಹಿ.ಸ.):

ಆ್ಯಂಕರ್:ವಾರಾಂತ್ಯದ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಬೆಸ್ಕಾಂ ವತಿಯಿಂದ ‘ಸ್ವಚ್ಛ ಬೆಂಗಳೂರು’ ಹಾಗೂ ‘ತ್ಯಾಜ್ಯ ಮುಕ್ತ ಬೆಂಗಳೂರು’ ಅಭಿಯಾನಕ್ಕೆ ಕೈಜೋಡಿಸಲಾಯಿತು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರ ಮಾರ್ಗದರ್ಶನದಲ್ಲಿ ರಾಜಾಜಿನಗರ 1ನೇ ಬ್ಲಾಕ್‌ನ 19ನೇ ಅಡ್ಡರಸ್ತೆಯಲ್ಲಿ ವಿಶೇಷ ಸ್ವಚ್ಛತಾ ಮತ್ತು ಪಾದಚಾರಿ ಸುರಕ್ಷತಾ ಅಭಿಯಾನ ನಡೆಯಿತು.

ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಬಳಕೆಯಲ್ಲಿಲ್ಲದ ಹಾಗೂ ಸ್ಥಗಿತಗೊಂಡಿರುವ ವಿದ್ಯುತ್ ಪರಿವರ್ತಕ ಕೇಂದ್ರಗಳು, ಆರ್‌ಎಂಯುಗಳು, ವಿದ್ಯುತ್ ಕಂಬಗಳು, ಎರಡು ಕಂಬಗಳ ಪರಿವರ್ತಕ ಕೇಂದ್ರಗಳು ಹಾಗೂ ಸ್ಪನ್ ಪೋಲ್‌ಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande