ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂ. ವಂಚನೆ ಆರೋಪ;ನಿರ್ದೇಶಕರಿಂದ ಸ್ಪಷ್ಟನೆ
ಕೋಟ್ಯಂತರ ರೂ. ವಂಚನೆ ಆರೋಪ ಮತ್ತು ಸ್ಪಷ್ಟನೆ
ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ಕೋಟ್ಯಂತರ ರೂ. ವಂಚನೆ ಆರೋಪ;ನಿರ್ದೇಶಕರಿಂದ ಸ್ಪಷ್ಟನೆ


ಬೆಂಗಳೂರು, 22 ಆಗಸ್ಟ್ (ಹಿ.ಸ.) ಆ್ಯಂಕರ್:

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ವಿರುದ್ಧ ಕೋಟ್ಯಂತರ ರೂಪಾಯಿ ಹಣಕಾಸು ವಂಚನೆ ಹಾಗೂ ಜೀವ ಬೆದರಿಕೆ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. 'ಫೀನಿಕ್ಸ್' ಎಂಬ ಹೊಸ ಸಿನಿಮಾ ನಿರ್ಮಾಣದ ಹೆಸರಿನಲ್ಲಿ ತಮ್ಮಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದು ಮೋಸ ಮಾಡಲಾಗಿದೆ ಎಂದು ಉದ್ಯಮಿ ಭಾಸ್ಕರ್ ಶೆಟ್ಟಿ ದೂರು ದಾಖಲಿಸಿದ್ದಾರೆ.

'ಫೀನಿಕ್ಸ್' ಚಿತ್ರ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3.85 ಕೋಟಿ ರೂ. ಪಡೆದರೂ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿಲ್ಲ ಮತ್ತು ಹಣ ಮರಳಿಸಿಲ್ಲ ಎಂದು ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ.

ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಕೇಳಿದಾಗ ನಿರ್ದೇಶಕರು ತಮಗೆ ಧಮ್ಕಿ ಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿರುವ ಓಂ ಪ್ರಕಾಶ್ ರಾವ್, ಭಾಸ್ಕರ್ ಶೆಟ್ಟಿ ನೇರವಾಗಿ ಅಷ್ಟು ಹಣ ನೀಡಿಲ್ಲ ಬದಲಿಗೆ ಫೈನಾನ್ಸ್ ಕೊಡಿಸಲು ಮಾತ್ರ ಸಹಾಯ ಮಾಡಿದ್ದರು ಎಂದಿದ್ದಾರೆ.

ಸಿನಿಮಾದಲ್ಲಿ ನಟಿಸಿದ್ದರೂ ತಮಗೆ 'ಹೀರೋ' ರೀತಿಯ ಪ್ರಮುಖ ಪ್ರಚಾರ ಸಿಗಲಿಲ್ಲ ಎಂಬ ಏಕೈಕ ಕಾರಣಕ್ಕೆ ಆಕ್ರೋಶಗೊಂಡು ಈ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ನಿರ್ದೇಶಕರು ತಿರುಗೇಟು ನೀಡಿದ್ದಾರೆ.

'ಫೀನಿಕ್ಸ್' ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಕೇವಲ 5 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಓಂ ಪ್ರಕಾಶ್ ರಾವ್ ಸ್ಪಷ್ಟಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande