ಕಲಬುರಗಿಯಲ್ಲಿ ಧೀಮಂತ ಧುರೀಣ ಅಭಿನಂದನಾ ಗ್ರಂಥ ಲೋಕಾರ್ಪಣೆ
ಕಲಬುರಗಿ, 22 ಆಗಸ್ಟ್ (ಹಿ.ಸ.): ಆ್ಯಂಕರ್:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಜೀವನ, ವ್ಯಕ್ತಿತ್ವ ಹಾಗೂ ಸೇವಾ ಸಾಧನೆಗಳನ್ನು ಒಳಗೊಂಡ ಅಭಿನಂದನಾ ಗ್ರಂಥ ‘ಧೀಮಂತ ಧುರೀಣ’ ಪುಸ್ತಕವನ್ನು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಲೋಕಾರ್ಪಣೆಗೊಳಿಸಿದರು. ಈ ಸಂದರ್
ಗ್ರಂಥ ಲೋಕಾರ್ಪಣೆ


ಕಲಬುರಗಿ, 22 ಆಗಸ್ಟ್ (ಹಿ.ಸ.):

ಆ್ಯಂಕರ್:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಜೀವನ, ವ್ಯಕ್ತಿತ್ವ ಹಾಗೂ ಸೇವಾ ಸಾಧನೆಗಳನ್ನು ಒಳಗೊಂಡ ಅಭಿನಂದನಾ ಗ್ರಂಥ ‘ಧೀಮಂತ ಧುರೀಣ’ ಪುಸ್ತಕವನ್ನು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಶಿಕ್ಷಣ, ಕಾರ್ಮಿಕ, ರೈಲ್ವೆ, ಕಂದಾಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿ, ಶೋಷಿತರು, ದಲಿತರು ಹಾಗೂ ಬಹುಜನರ ಪರವಾಗಿ ಹೋರಾಡಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಖರ್ಗೆ ಅವರ ಕೊಡುಗೆ ಮಹತ್ವದ್ದಾಗಿದೆ. ಇಎಸ್‌ಐ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆ ಮತ್ತು ಐತಿಹಾಸಿಕ 371ಜೆ ಕಲಂ ಸೇರ್ಪಡೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಇಳಿವಯಸ್ಸಿನಲ್ಲಿಯೂ ಖರ್ಗೆ ಅವರು ಹೋರಾಟ ಮುಂದುವರಿಸಿರುವುದು ಹೆಮ್ಮೆಯ ಸಂಗತಿ. ಅವರ ಹೋರಾಟಕ್ಕೆ ಜಿಲ್ಲೆಯ ಹಾಗೂ ರಾಜ್ಯದ ಜನತೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಹರಿಪ್ರಸಾದ್ ಕರೆ ನೀಡಿದರು.

‘ಧೀಮಂತ ಧುರೀಣ’ ಕೃತಿಯಲ್ಲಿ ದೇಶದ ಹಲವು ಗಣ್ಯರು ಖರ್ಗೆ ಅವರ ಜೀವನ, ವ್ಯಕ್ತಿತ್ವ, ಸಾರ್ವಜನಿಕ ಸೇವೆ ಹಾಗೂ ಸೈದ್ಧಾಂತಿಕ ಮೌಲ್ಯಗಳ ಕುರಿತು ವಿವರವಾಗಿ ದಾಖಲಿಸಿದ್ದಾರೆ. ರಾಜಕಾರಣಿಗಳಷ್ಟೇ ಅಲ್ಲದೆ ವಿದ್ಯಾರ್ಥಿಗಳು ಮತ್ತು ಯುವಜನರು ಈ ಪುಸ್ತಕವನ್ನು ಓದಬೇಕು. ರಾಜಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇದು ಪ್ರೇರಣಾದಾಯಕ ಕೃತಿಯಾಗಲಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande