
ಕೋಲಾರ, ಆಗಸ್ಟ್ ೨೨ (ಹಿ.ಸ.)
ಆ್ಯಂಕರ್ : ಜಿಲ್ಲಾ ಒಕ್ಕಲಿಗರ ಸಂಘದಿ0ದ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಜಿಲ್ಲೆಯ ಸಮುದಾಯದ ಅಭ್ಯರ್ಥಿಗಳಿಗೆ ಪುರಸ್ಕಾರ ಮತ್ತು ನಾಡ ಪ್ರಭು ಕೆಂಪೇಗೌಡರ ೫೧೭ನೇ ಜಯಂತಿಯಲ್ಲಿ ಭಾಗವಹಿಸಿದ ಪಲ್ಲಕ್ಕಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನಗರದ ಟಿ ಚನ್ನಯ್ಯ ರಂಗಮಂದಿರ ಭಾನುವಾರ ಆಗಸ್ಟ್ ೨೩ ರಂದು ಬೆಳೆಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ವಿ ಶಂಕರಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಿವ್ಯ ಸನಿದ್ಯಾ ಮತ್ತು ಆಶೀರ್ವಚನವನ್ನು ಆದಿಚುಂಚನಗಿರಿ ಶ್ರೀ ಮಠ ಪೀಠಾಧ್ಯಕ್ಷರಾದ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಪಟ್ಟದ ನಾಯಕನಹಳ್ಳಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವದೂತ ಸ್ವಾಮೀಜಿಗಳು, ವಿಶ್ವ ಒಕ್ಕಲಿಗರ ಮಠ ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಅಧ್ಯಕ್ಷತೆಯನ್ನು ಕೆ ವಿ. ಶಂಕರಪ್ಪ ವಹಿಸಲಿದ್ದಾರೆ.
ಸಮುದಾಯದ ಶಾಸಕರಾದ ಜಿ. ಕೆ. ವೆಂಕಟಶಿವಾರೆಡ್ಡಿ, ಕೆ. ವೈ. ನಂಜೇಗೌಡ, ಮಾಜಿ ಸಚಿವ ಕೆ ಶ್ರೀವಾಸಗೌಡ, ಎಂಎಲ್ಸಿರಾದ ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಚಿದಾನಂದಗೌಡ, ಮಾಜಿ ಶಾಸಕರಾದ ಕೆ ಎಸ್ ಮಂಜುನಾಥ್ ಗೌಡ, ಮಾಜಿ ಎಂಎಲ್ಸಿ ರಾದ ವೈ. ಎ. ನಾರಾಯಣಸ್ವಾಮಿ, ತೂಪಲ್ಲಿ ಆರ್. ಚೌಡರೆಡ್ಡಿ, ಡಿ ಜಿಐಪಿ ಡಿ. ದೇವರಾಜ್,
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಲುವಳ್ಳಿ ರಮೇಶ್, ಕೋನಪ್ಪ ರೆಡ್ಡಿ, ಡಾ. ಡಿ. ಕೆ. ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮತ್ತು ಕುಲಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸುವ ಮೂಲಕಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್