
ಕೋಲಾರ, ಆಗಸ್ಟ್ ೨೨ (ಹಿ.ಸ.)
ಆ್ಯಂಕರ್ : ರಸಪ್ರಶ್ನೆ ಎಂಬುದು ಕೇವಲ ಪ್ರಶ್ನೆ ಉತ್ತರದ ಪ್ರಕ್ರಿಯೆ ಅಲ್ಲ. ಇದೊಂದು ಜ್ಞಾನದ ಹಬ್ಬ. ಇದರಿಂದ ಜಗತ್ತನ್ನು ಓದುವ ಅನುಭವವಾಗುತ್ತದೆ. ಶ್ರಮ, ಮಾರ್ಗದರ್ಶನ, ಪ್ರೋತ್ಸಾಹ ನೀಡುವ ಪ್ರತಿಯೊಬ್ಬರಿಗೂ ಸಂತಸದ ಕ್ಷಣ ಆಗುತ್ತದೆ. ಇಂತಹ ಗೆಲವು ಮನಸ್ಸಿನ ನೆಮ್ಮದಿ, ಆಹ್ಲಾದಗಳು ಸೃಷ್ಟಿಸುವ ಕಾರ್ಯ ಆಗುತ್ತದೆ. ಇದರಿಂದ ಜ್ಞಾನಾಭಿವೃದ್ದಿ ಜೊತೆಗೆ ಆನಂದದ ಕ್ಷಣಗಳನ್ನು ಕಾಣಲು ಸಾದ್ಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕೋಲಾರ ಜಲ್ಲಾದ್ಯಕ್ಷ ಜಿ.ಶ್ರೀನಿವಾಸ್ ಇಂದಿಲ್ಲಿ ತಿಳಿಸಿದರು.
ನಗರದ ಮಹಿಳಾ ಸಮಾಜ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ರಸಪ್ರಶ್ನೆ ರಾಜ್ಯಕ್ಕೆ ಮೊದಲ ಪ್ರಶಸ್ತಿ ಪಡೆದ ವಿದ್ಯಾರ್ಥಿ ಸ್ವರೂಫ್ ರವರನ್ನು ಅಭಿನಂದಿಸಿ ಮಾತನಾಡಿದರು.
ವಿದ್ಯಾರ್ಥಿಯ ಚುರುಕುತನ, ಸಾಮಾನ್ಯ ಜ್ಞಾನ ಮತ್ತು ಆತ್ಮವಿಶ್ವಾಸ ಮೆಚ್ಚುವಂತಹದ್ದು, ಪ್ರಶಸ್ತಿ ಪಡೆದ ನಂತರ ಇನ್ನಷ್ಟು ಓದಲು ಶಿಕ್ಷಕರು ಪೋಷಕರು ಕಾರಣೀಭೂತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮುತಿಯ ಸದಸ್ಯರಾದ ಶರಣಪ್ಪ ಜಮಾದಾರ್, ಮುಕುಂದ ಡಿ.ಎನ್, ಎಸ್ ಸುರೇಶ್ ಕುಮಾರ್, ಮಂಜುಳಾ, ಜಗನ್ನಾಥ್ ಕೆ.ವಿ, ಮಂಜುಳಾ ಕೊಂಡರಾಜನಹಳ್ಳಿ, ಶಿಕ್ಷಕರುಗಳಾದ ಶಿಲ್ಪ, ಸವಿತಾ, ಶಿವಪ್ಪ, ಸತೀಶ್, ಹೇಮಾ, ಉಮಾದೇವಿ, ಭವ್ಯಾ, ರೇಷ್ಮಾ, ನಾಡಿಯಾ, ರಮ್ಯಾಶ್ರೀ, ಶ್ರೀನಾಥ್, ಶಿವಪ್ಪ, ಮುರಳಿ, ಅನುರಾಧಾ, ಶಮಾ, ಮೋನಿಕಾ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್