
ಬೆಂಗಳೂರು, 22 ಆಗಸ್ಟ್ (ಹಿ.ಸ.):
ಆ್ಯಂಕರ್:ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಆಲೋಚನೆ ಹಾಗೂ ಪ್ರಶ್ನಿಸುವ ಧೈರ್ಯವನ್ನು ತುಂಬಿದ ಸಾಹಿತಿ, ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ಪುಣ್ಯಸ್ಮರಣೆಯಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.
ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ‘ಸಂಸ್ಕಾರ’, ‘ಭಾರತೀಪುರ’, ‘ಘಟಶ್ರಾದ್ಧ’ ಹಾಗೂ ‘ಅವಸ್ಥೆ’ ಸೇರಿದಂತೆ ಶ್ರೇಷ್ಠ ಕೃತಿಗಳ ಮೂಲಕ ಸಮಾಜದ ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ದಿಟ್ಟವಾಗಿ ಪ್ರಶ್ನಿಸಿದ ಅಪರೂಪದ ಲೇಖಕ ಅನಂತಮೂರ್ತಿ ಎಂದು ಸ್ಮರಿಸಿದ್ದಾರೆ.
ಎದುರಾಳಿಗಳ ಮಾತನ್ನೂ ಶಾಂತವಾಗಿ ಆಲಿಸುವ ಹಾಗೂ ಭಿನ್ನಾಭಿಪ್ರಾಯಗಳ ನಡುವೆಯೂ ಮನುಷ್ಯ ಸಂಬಂಧಗಳನ್ನು ಪ್ರೀತಿಸುವ ಅವರ ಸಂವಾದದ ಸಂಸ್ಕೃತಿ ಇಂದಿನ ಕಾಲಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.