ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿದ ಕಲ್ಲಂಡೂರು ನಾಗರಾಜ್
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿದ ಕಲ್ಲಂಡೂರು ನಾಗರಾಜ್
ಕೇಂದ್ರ ಸರ್ಕಾರದ ಸೂಕ್ಷö್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕವಾಗಿರುವ ಕಲ್ಲಂಡೂರು ಡಾ.ಕೆ. ನಾಗರಾಜ್ ರವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸನ್ಮಾನಿಸಿದರು.


ಕೋಲಾರ, ಆಗಸ್ಟ್ ೨೨ (ಹಿ.ಸ.)

ಆ್ಯಂಕರ್ : ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧೀನದಲ್ಲಿರುವ ಎನ್ಐ ಎಂ.ಎಸ್.ಎಂ.ಇ. ಗವರ್ನಿಂಗ್ ಕೌನ್ಸಿಲ್ನ ಸದಸ್ಯರಾಗಿ ಕಲ್ಲಂಡೂರು ಡಾ.ಕೆ. ನಾಗರಾಜ್ ನೇಮಕಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಎಂಎಸ್ಎಂಇ ಹಾಗೂ ಕಾರ್ಮಿಕ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಇಲಾಖೆಗೆ ಸಂಬ0ಧಿಸಿದಂತೆ ಚರ್ಚೆ ನಡೆಸಿದರು

ಈ ಸಂದರ್ಭದಲ್ಲಿ ಡಾ. ನಾಗರಾಜ್ ರವರನ್ನು ಶೋಭಾ ಕರಂದ್ಲಾಜೆ ಅವರನ್ನು ಸನ್ಮಾನಿಸಿದರು. ತಮ್ಮನ್ನು ಇಲಾಖೆಯ ಗವರ್ನಿಂಗ್ ಕೌನ್ಸಿಲ್ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಎಂಎಸ್ಎ0ಇ ಕ್ಷೇತ್ರದ ಅಭಿವೃದ್ಧಿ, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ಉತ್ತೇಜನ ಮತ್ತು ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಿದರು.

ಈ ನೇಮಕದಿಂದ ರಾಜ್ಯದ ಉದ್ಯಮಶೀಲತೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ದೊರೆಯುವಂತಾಗಲಿ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande