ನೂತನ ಗ್ರಾಹಕರ ಸೇವಾ ಕೇಂದ್ರ ಆರಂಭ: ಅಂಚೆ ಅಧೀಕ್ಷಕ ಎಸ್.ಎಸ್.ಶಿರಹಟ್ಟಿ
ಗದಗ, 21 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ನಗರದ ಕುಮಾರವ್ಯಾಸ ವ್ಯಾಪಾರ ಮಳಿಗೆ ಸಂಕೀರ್ಣದಲ್ಲಿ ನೂತನ ಅಂಚೆ ಸೇವಾ ಕೇಂದ್ರಕ್ಕೆ ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಅಂಚೆ ಇಲಾಖೆ ಗ್ರಾಹಕರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆಗಳನ್
ಫೋಟೋ


ಗದಗ, 21 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ನಗರದ ಕುಮಾರವ್ಯಾಸ ವ್ಯಾಪಾರ ಮಳಿಗೆ ಸಂಕೀರ್ಣದಲ್ಲಿ ನೂತನ ಅಂಚೆ ಸೇವಾ ಕೇಂದ್ರಕ್ಕೆ ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಅಂಚೆ ಇಲಾಖೆ ಗ್ರಾಹಕರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ನೂತನ ಅಂಚೆ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ. ಈ ಕೇಂದ್ರದ ಮೂಲಕ ಗ್ರಾಹಕರಿಗೆ ಅಗತ್ಯ ಅಂಚೆ ಸೇವೆಗಳು ಮತ್ತಷ್ಟು ಸುಲಭವಾಗಿ ಮತ್ತು ವೇಗವಾಗಿ ದೊರೆಯಲು ಸಹಕಾರಿಯಾಗಿದೆ ಎಂದರು.

ಗ್ರಾಹಕರಿಗೆ ಸುಲಭ ಸೇವೆಗೆ ಅನುಕೂಕಲ ನೀಡುವ ಸಲುವಾಗಿ ಗದಗ ನಗರದ ಹೃದಯ ಭಾಗದಲ್ಲಿ ನೂತನ ಅಂಚೆ ಫ್ರಾಂಚೈಸಿ/ಗ್ರಾಹಕ ಸೇವಾ ಕೇಂದ್ರಗಳಿಗೆ ಸಮ್ಮತಿ ನೀಡಿದೆ. ಇನ್ನೂ, ಅಂಚೆ ಇಲಾಖೆ ಇಂದು ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿರದೆ, ಜನರ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಸೇವಾ ಸಂಸ್ಥೆಯಾಗಿ ರೂಪಾಂತರಗೊಂಡಿದೆ.

ತಂತ್ರಜ್ಞಾನ ಹಾಗೂ ಹೊಸ ಸೇವಾ ಕೇಂದ್ರಗಳ ಮೂಲಕ ಅಂಚೆ ಸೇವೆಗಳು ಈಗ ಗ್ರಾಹಕರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗುತ್ತಿವೆ. ಗದಗ ನಗರದ ನಾಗರಿಕರು ಈ ನೂತನ ಕೇಂದ್ರಗಳ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಧಾನ ಅಂಚೆ ಪಾಲಕರಾದ ಲಕ್ಷ್ಮಣ ಅಸುಂಡಿ, ಅಂಚೆ ಸಹಾಯಕರಾದ ಎಂ.ಟಿ.ಕರಿಗಾರ,ಮಧು ಶಿರೂರ, ವೆಂಕಟೇಶ ಆಕಳವಾಡಿ ಮತ್ತಿತರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande