ಬಳ್ಳಾರಿ: ನಂದಿನಿ ಹಾಲು ಉತ್ಪನ್ನಗಳ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ
ಬಳ್ಳಾರಿ, 21 ಆಗಸ್ಟ್ (ಹಿ.ಸ.) ಆ್ಯಂಕರ್: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ರಾಬಕೊವಿ) ಸಂಯುಕ್ತ ಆಶ್ರಯದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಬಳ್ಳಾರಿ: 'ನಂದಿನಿ' ಜಾಗೃತಿ : ಚಿತ್ರಕಲಾ ಸ್ಪರ್ಧೆ


ಬಳ್ಳಾರಿ: 'ನಂದಿನಿ' ಜಾಗೃತಿ : ಚಿತ್ರಕಲಾ ಸ್ಪರ್ಧೆ


ಬಳ್ಳಾರಿ: 'ನಂದಿನಿ' ಜಾಗೃತಿ : ಚಿತ್ರಕಲಾ ಸ್ಪರ್ಧೆ


ಬಳ್ಳಾರಿ, 21 ಆಗಸ್ಟ್ (ಹಿ.ಸ.)

ಆ್ಯಂಕರ್: ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ರಾಬಕೊವಿ) ಸಂಯುಕ್ತ ಆಶ್ರಯದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ್ ರೆಡ್ಡಿ ಅವರು, ಮಾನವನ ದೈನಂದಿನ ಜೀವನದಲ್ಲಿ ಹಾಲು ಅತ್ಯಂತ ಅವಶ್ಯಕ ಪೌಷ್ಟಿಕ ಆಹಾರವಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ವಿಟಮಿನ್-ಬಿ2 ನಂತಹ ಪ್ರಮುಖ ಪೋಷಕಾಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.

ಒಕ್ಕೂಟವು ನಿತ್ಯ ಸರಾಸರಿ 2.50 ಲಕ್ಷ ಲೀಟರ್ ಗುಣಮಟ್ಟದ ಹಾಲನ್ನು ಶೇಖರಿಸಿ, ವೈಜ್ಞಾನಿಕವಾಗಿ ಸಂಸ್ಕರಿಸಿ, ಸಂಪೂರ್ಣ ಕಲಬೆರಕೆ ರಹಿತ ಮತ್ತು ಸುರಕ್ಷಿತ ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಕಾರ್ಯವೈಖರಿಯನ್ನು ವಿವರಿಸಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಯೋಜನೆಗಳನ್ನು ಒಕ್ಕೂಟವು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.

ಐಸ್ಕ್ರೀಂ ಘಟಕದ ಅಪರ ನಿರ್ದೇಶಕ ರವಿಕಿರಣ್ ಅವರು ಶುದ್ಧ ನಂದಿನಿ ಐಸ್ಕ್ರೀಂ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಫ್ರೋಜನ್ ಡೆಸರ್ಟ್ಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು.

ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿ. ನಾಗರಾಜ ಶರ್ಮ ಅವರು ಸಮತೋಲನ ಆಹಾರದ ಮಹತ್ವ ಹಾಗೂ ನಂದಿನಿ ಉತ್ಪನ್ನಗಳಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

*ಕಿರುಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಗಳು:*

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಶೇಖರಣೆ ಮತ್ತು ವೈಜ್ಞಾನಿಕ ಸಂಸ್ಕರಣಾ ವಿಧಾನಗಳನ್ನು ವಿವರಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಉತ್ಪನ್ನಗಳ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಸರಸ್ವತಿ, ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಕೆ.ಆರ್. ಇಂದುಕಲಾ, ಜ್ಯೋತಿ, ಮಾರುಕಟ್ಟೆ ಮೇಲ್ವಿಚಾರಕರಾದ ಲೋಹಿತಕುಮಾರ್, ಪ್ರಸನ್ನಕುಮಾರ್, ಕೆಮಿಸ್ಟ್ ಹೆಚ್. ಸರೋಜ, ಸಿಬ್ಬಂದಿಗಳಾದ ನೂರ್ ಮಹಮ್ಮದ್, ಸಿ.ಎನ್. ಮಂಜುನಾಥ್ ಮತ್ತು ಬಾಬು ಬಿ. ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande