ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆ ; ಕಾಂಗ್ರೆಸ್ ನಿಂದ ತಿರುಗೇಟು
ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆ ; ಕಾಂಗ್ರೆಸ್ ನಿಂದ ತಿರುಗೇಟು
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯವರು ನಡೆಸುತ್ತಿರುವ ಪ್ರತಿಭಟನೆಗೆ ವಿರುದ್ಧವಾಗಿ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಕೋಲಾರ, 21 ಆಗಸ್ಟ್ (ಹಿ.ಸ.):

ಆ್ಯಂಕರ್ : ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಕಳೆದ ಐದು ದಿನಗಳಿಂದ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ವಿರುದ್ದವಾಗಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದಿಂದ ಸಚಿವ ನಾಗೇಂದ್ರ ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಅಂಬರೀಷ್ ಸಚಿವ ಬಿ.ನಾಗೇಂದ್ರ ರಾಜೀನಾಮೆಯನ್ನು ಬಿಜೆಪಿಯವರು ಕೇಳುತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರದ ಆರೋಪ ಬಂದ ಕೂಡಲೇ ಅವರೇ ಸ್ವಇಚ್ಛೆಯಿಂದ ರಾಜೀನಾಮೆಯನ್ನು ನೀಡಿದ್ದರು. ಆ ಬಳಿಕ ಎಸ್ಐಟಿ ತನಿಖೆಯಲ್ಲಿ ಅವರು ಭಾಗಿಯಾಗಿಲ್ಲ ಎಂದು ವರದಿ ನೀಡಲಾಗಿತ್ತು. ಇದೀಗ ಪುನಃ ಸಚಿವ ಸಂಪುಟದಲ್ಲಿ ಅವಕಾಶದಲ್ಲಿ ನೀಡಲಾಗಿದೆ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಆಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣ ಕದ್ದ ವಿಚಾರವಾಗಿ ಎಸ್ಐಟಿ ನೀಡಿದ ವರದಿ ಅವರಿಗೆ ಒಪ್ಪಿಗೆಯಾಗುತ್ತದೆ. ಆದರೆ ಇಲ್ಲಿನ ಎಸ್ಐಟಿ ವರದಿ ನೀಡಿದರೆ ಒಪ್ಪಿಗೆಯಾಗುವುದಿಲ್ಲವೇ ? ಅವರಿಗೆ ಒಂದು ನ್ಯಾಯ ಕಾಂಗ್ರೆಸ್ ಪಕ್ಷಕ್ಕೆ ಒಂದು ನ್ಯಾಯವಾ ಅವರಿಗೆ ಪ್ರತಿಭಟನೆ ಮಾಡುವುದಕ್ಕೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಸದಾ ದಲಿತರನ್ನೇ ಧ್ವೇಷ ಮಾಡುತ್ತಾರೆ. ದಲಿತರ ವಿರುದ್ಧವೇ ಘೋಷಣೆ ಹಾಕುತ್ತಾರೆ. ದಲಿತ ಮಂತ್ರಿಗಳ ವಿರುದ್ಧ ಹೋರಾಟ ಮಾಡುತ್ತಾರೆ. ಬೇರೆ ಯಾರ ಮೇಲೂ ಮಾಡುವುದಿಲ್ಲ. ಬಿ.ವೈ.ವಿಜಯೇಂದ್ರ ಅವರು ಆರ್ಟಿಜಿಎಸ್ ಮುಖಾಂತರ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದರು. ಶಶಿಕಲಾ ಜೊಲ್ಲೆ ಕೋಟ್ಯಾಂತರ ರೂ ಹಣ ಲೂಟಿ ಮಾಡಿದ್ದರು. ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಯಾಕೆ ಜೈಲಿಗೆ ಹೋಗಿದ್ದು ಇದನ್ನು ಪ್ರಶ್ನೆ ಮಾಡಲಿ. ಆದರೂ ಅವರನ್ನು ಉನ್ನತ ಸ್ಥಾನದಲ್ಲಿ ಇರಿಸಿಲ್ಲವೇ ಎಂದು ತಿರುಗೇಟು ನೀಡಿದರು.

ರಾಮಲೀಲಾ ಮೈದಾನದಲ್ಲಿ ಖರ್ಗೆಯವರು ಹೋಗಿ ಭಾಷಣ ಮಾಡಿದ್ದಕ್ಕೆ ಬಿಜೆಪಿ ಪೋಷಿತ ಶ್ರೀರಾಮಸೇನೆ ಮುಖಂಡರು ಗೋಮೂತ್ರ ಸಿಂಪಡಿಸಿ, ಅಸ್ಪೃಶ್ಯ ವ್ಯಕ್ತಿ ಭಾಷಣ ಮಾಡಿದ್ದಾರೆಂದು ಸ್ವಚ್ಛಗೊಳಿಸಿದ್ದಾರೆ. ಈ ಘಟನೆ ನಡೆದು ತಿಂಗಳಾದರೂ ಬಿಜೆಪಿಯ ಯಾವ ನಾಯಕರೂ ಪ್ರಶ್ನೆ ಮಾಡದೇ ಇರುವುದನ್ನು ನೋಡಿದರೆ ಇನ್ನೂ ಸಹ ಅಸ್ಪೃಶ್ಯತೆಯನ್ನು ಇಟ್ಟುಕೊಂಡಿದ್ದಾರೆ0ಬುದು ನಮ್ಮ ಮನಗಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಅವಾಚ್ಯವಾಗಿ ಮಾತನಾಡಿದಾಗಲೂ ಧ್ವನಿ ಎತ್ತದ ಬಿಜೆಪಿಯವರು ನಿಜವಾದ ದಲಿತ ವಿರೋಧಿಗಳಾಗಿದ್ದಾರೆ. ಸಚಿವ ನಾಗೇಂದ್ರ ಅವರಿಂದ ಭ್ರಷ್ಟಾಚಾರ ಆಗಿದ್ದರೆ, ಅವರು ತಪ್ಪು ಮಾಡಿದ್ದರೆ ಸಚಿವ ಸ್ಥಾನದಿಂದ ತೆಗೆದು ಹಾಕಲಿ ನಮ್ಮ ಅಭ್ಯಂತರವಿಲ್ಲ. ಆದರೆ, ವಿನಾಕಾರಣ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ಇರುವ ಶೇ.೭೦ ರಷ್ಟು ಸಚಿವರು ಭ್ರಷ್ಟರೇ ಇದ್ದು, ಬೇರೆಯವರ ರಾಜೀನಾಮೆ ಕೇಳುವ ನೈತಿಕತೆ ಅವರಿಗೆ ಇಲ್ಲ. ಮೀಸಲಾತಿ ಹೆಚ್ಚಳದಲ್ಲೂ ಅನ್ಯಾಯ ಮಾಡಿರುವ ನೀವು ದಲಿತರ ಪರ ಇದ್ದೀರಾ ಎಂದು ಪ್ರಶ್ನೆ ಮಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ವ್ಯಾಪಲಪಲ್ಲಿ ನರೇಶ್, ಬೈರಂಡಹಳ್ಳಿ ನಾಗೇಶ್, ವಾಸು, ಹೊಗಳಗೆರೆ ಆಂಜಿ, ನರಸಿಂಹ, ಗಡ್ಡೂರು ಪ್ರಕಾಶ್, ಬಂಗಾರಪೇಟೆ ನಾರಾಯಣಸ್ವಾಮಿ, ದೇವರಾಜ್, ಕಲ್ವಂಜಲಿ ರವೀಂದ್ರ, ಅನಿಲ್, ಹರಟಿ ಸಂಪತ್, ಸುಗಟೂರು ಕೃಷ್ಣಪ್ಪ, ಸಂಗೊ0ಡಹಳ್ಳಿ ಪಿಳ್ಳಪ್ಪ, ಪವನ್,, ಯಾರಂಘಟ್ಟ ಮಂಜು, ಕಾರ್ತಿಕ್, ವೆಂಕಟಾಚಲಪತಿ, ಶಶಿ, ಅರುಣ್, ವೆಂಕಟೇಶ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande