
ಕೋಲಾರ, 21 ಆಗಸ್ಟ್ (ಹಿ.ಸ.):
ಆ್ಯಂಕರ್ : ಜೈವಿಕ ಇಂಧನವನ್ನು ಸ್ಥಳೀಯವಾಗಿ ದೊರೆಯುವ ತ್ಯಾಜ್ಯಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಇಂಧನವನ್ನು ತಯಾರಿಸಿ ಬಳಸುವುದರಿಂದ ಹೆಚ್ಚು ಲಾಭದಾಯಕ ಎಂದು ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ರೈತರಿಗೆ ಅರಿವು ಮೂಡಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಬಿಎಸ್ಸಿ ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ವಿಷಯ ತಜ್ಞ ವೆಂಕಟೇಶಪ್ಪ ರೈತರಿಗೆ ಜೈವಿಕ ಇಂಧನ ಮತ್ತು ಅದರ ಬಳಕೆ ಕುರಿತು ಅರಿವು ಮೂಡಿಸಿದರು.
ರೈತರು ರಾಸಾಯನಿಕಗಳ ಮೊರೆ ಹೋಗದೆ ಸಾವಯವ ಕೃಷಿ ಕೈಗೊಳ್ಳುವುದು ಸೂಕ್ತ ಎಂದ ಅವರು, ಇದರಿಂದ ಮಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ, ಸಾವಯವ ಕೃಷಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ, ಇದಕ್ಕೆ ರಸಾಯಿಕ ವಸ್ತುಗಳ ಹೆಚ್ಚು ಬಳಕೆಯಿಂದ ಭೂಮಿಯ ಮೇಲಾಗಿರುವ ದುಷ್ಪರಿಣಾಮಗಳೇ ಜನರನ್ನು ಮತ್ತೆ ಸಾವಯವದತ್ತ ಸಾಗುವಂತೆ ಮಾಡಿದೆ.
ಮುಂದಿನ ದಿನಮಾನಗಳಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವ ಪೆಟ್ರೋಲ್, ಡೀಸೆಲ್ ಬಂದ್ ಆದಲ್ಲಿ ಸ್ವತಃ ನಾವೇ ಇಂಧನವನ್ನು ತಯಾರಿಸಿಕೊಂಡು ಬಳಸಬಹುದು. ಇಂತಹ ಪ್ರಯತ್ನ ರೈತರಿಂದಲೇ ಆಗಬೇಕು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜೈವಿಕ ಇಂಧನ ಎಂದರೇನು, ಜೈವಿಕ ಇಂಧನದ ಲಾಭಗಳು ಮತ್ತು ಸ್ಥಳೀಯವಾಗಿ ದೊರೆಯುವಂತಹ ಬೇವು, ಹೊಂಗೆ, ಹರಳು, ಜತ್ರೋಪಾ, ಸೀಮರುಬ, ಸಾಸಿವೆ ಬೀಜಗಳನ್ನು ಉಪಯೋಗಿಸಿಕೊಂಡು ಪರಿಸರ ಸ್ನೇಹಿ ಜೈವಿಕ ಇಂಧನ, ಬೇವಿನ ಹಿಂಡಿ, ಹೊಂಗೆ ಹಿಂಡಿ ತಯಾರಿಸಿ ಉಪಯೋಗಿಸುವ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಬೇಸಾಯ ಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ವೆಂಕಟರಮಣನಾಯಕ್ ಜಿ.ವಿ, ಬೆಳೆ ಶರೀರ ಶಾಸ್ತç ವಿಭಾಗದ ಡಾ.ಪಲ್ಲವಿ, ವಿದ್ಯಾಥಿಳಾದ ಅತೀಶ್ ಪಟೇಲ್ ಡಿ.ಎಸ್., ಎಂ.ಚೇತನ್, ಪಿ.ಜಿ.ದೀಪಿಕಾ, ಎಸ್.ದ್ವಾರಕಿ, ಜಿ.ಗಾನವಿ, ಜಿ.ಹೆಚ್.ಗುರುದೇವಿ, ಜೆ.ಭೀಮರಾಜ್, ಸಿ.ಕಮಲಾಕ್ಷಿತ, ಜೆ.ಲೀಲಾ, ಪಿ.ಮೌನೇಶ್, ರಾಹುಲ್ ಸಿಂದೆ, ಸಿದ್ದಲಿಂಗ ರೆಡ್ಡಿ, ಬಿ.ವಿನಾಯಕ ತರುಣ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್