
ಬಳ್ಳಾರಿ, 21 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ಸೋಮಸಮುದ್ರ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಂಡಿರುವುದರಿ0ದ ಆಗಸ್ಟ್ 23 ರಂದು ಬೆಳಿಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ 110/11ಕೆ.ವಿ ಸೋಮಸಮುದ್ರ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ಗುಡದೂರು ವಿದ್ಯುತ್ ಉಪಕೇಂದ್ರದಿ0ದ ವಿದ್ಯುತ್ ಸರಬರಾಜಾಗುವ ವಿವಿಧ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-1 ಎನ್.ಜೆ.ವೈ ಬಾಲಾಜಿ ನಗರ ಕ್ಯಾಂಪ್ ಮಾರ್ಗದ ಕರ್ಲಗುಂದಿ, ವಿಜಯನಗರ ಕ್ಯಾಂಪ್, ಜಾಲಿಬೆಂಜಿ, ಬಾಲಾಜಿ ನಗರ ಕ್ಯಾಂಪ್, ಜ್ಯಾಲಿಬೆಂಜಿ. ಎಫ್-2 ಐ.ಪಿ ಸೆಟ್ ಫೀಡರ್ ಸೋಮಸಮುದ್ರ ಮಾರ್ಗದ ಸೋಮಸಮುದ್ರ ವಕ್ರಾಣಿ ಕ್ಯಾಂಪ್, ಲಕ್ಷಿನಗರ ಕ್ಯಾಂಪ್, ವೀರಾಂಜಿನೇಯ ಕ್ಯಾಂಪ್, ಕೋಳೂರು, ಮದಿರೆ, ಕೊಳಗಲ್ಲು, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್, ಕೃಷಿ ಪ್ರದೇಶಗಳು.
ಎಫ್-11 ಶ್ರೀಧರಗಡ್ಡೆ ಎನ್.ಜೆ.ವೈ ಫೀಡರ್ ಮಾರ್ಗದ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷಿö್ಮನಗರ ಕ್ಯಾಂಪ್, ವೀರಾಂಜಿನೇಯ ಕ್ಯಾಂಪ್, ಕೋಳೂರು, ಮದಿರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್, ಕೋಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್, ವಿ.ಟಿ.ಕ್ಯಾಂಪ್.
ಎಫ್-4 ಐ.ಪಿ ಸೆಟ್ ಕರ್ಲಗುಂದಿ ಫೀಡರ್ ಮಾರ್ಗದ ಕರ್ಲಗುಂದಿ, ಬಾಲಾಜಿನಗರ ಕ್ಯಾಂಪ್, ಜ್ಯಾಲಿಬೆಂಜಿ, ಶ್ರೀಧರಗಡ್ಡ, ವಿಜಯನಗರ ಕ್ಯಾಂಪ್ ಕೃಷಿ ಪ್ರದೇಶಗಳು. ಎಫ್-5 ಡಾಕ್ಟರ್ ಕ್ಯಾಂಪ್ ಮಾರ್ಗದ ಶ್ರೀಧರಗಡ್ಡೆ, ಗುಡಾರ್ ನಗರ.
ಎಫ್-01 ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಕೃಷಿ ಪ್ರದೇಶಗಳು. ಎಫ್-02 ಗುಡುದೂರು ಐಪಿ ಮಾರ್ಗದ ಗುಡುದೂರು ಕೃಷಿ ಪ್ರದೇಶಗಳು. ಎಫ್-03 ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್ ಚಾನಾಳ್ ಕೃಷಿ ಪ್ರದೇಶಗಳು. ಎಫ್-04 ಗುಡುದೂರು ಎನ್.ಜೆ.ವೈ ಮಾರ್ಗದ ಹಂದಿಹಾಳ್, ಚಾನಾಳ್, ಗುಡುದೂರು ಗ್ರಾಮಗಳು. ಎಫ್-05 ಚಾನಾಳ್ ಐಪಿ ಮಾರ್ಗದ ಚಾನಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾಗಿ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್