ಟ್ರ್ಯಾಕ್ಟರ್ ನಲ್ಲಿ ಅಯೋಧ್ಯೆಗೆ ಹೊರಟ ಶ್ರೀರಾಮ ಭಕ್ತರು
ಬಾಗಲಕೋಟೆ, 20 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪುರ ಎಸ್.ಕೆ. ಗ್ರಾಮದ ಶ್ರೀರಾಮ ಭಕ್ತರು ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ಟ್ರ್ಯಾಕ್ಟರ್ ಮೂಲಕ ಸಾವಿರಾರು ಕಿ.ಮೀ.ಗಳ ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸ


ಬಾಗಲಕೋಟೆ, 20 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಖಾನಾಪುರ ಎಸ್.ಕೆ. ಗ್ರಾಮದ ಶ್ರೀರಾಮ ಭಕ್ತರು ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ಟ್ರ್ಯಾಕ್ಟರ್ ಮೂಲಕ ಸಾವಿರಾರು ಕಿ.ಮೀ.ಗಳ ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ.

ಗ್ರಾಮದ 15ಕ್ಕೂ ಹೆಚ್ಚು ರಾಮಭಕ್ತರು ಟ್ರ್ಯಾಕ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದು, ಅಯೋಧ್ಯೆ, ಪ್ರಯಾಗರಾಜ, ಕಾಶಿ, ಕೇದಾರನಾಥ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಸಾಮಾನ್ಯವಾಗಿ ಬಸ್, ರೈಲು ಅಥವಾ ಇತರ ವಾಹನಗಳ ಮೂಲಕ ಧಾರ್ಮಿಕ ಕ್ಷೇತ್ರಗಳ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ, ಖಾನಾಪುರ ಎಸ್.ಕೆ. ಗ್ರಾಮದ ಭಕ್ತರು ವಿಶಿಷ್ಟವಾಗಿ ಟ್ರ್ಯಾಕ್ಟರ್ ಮೂಲಕವೇ ದೀರ್ಘ ಯಾತ್ರೆ ಕೈಗೊಂಡಿರುವುದು ವಿಶೇಷ ಗಮನ ಸೆಳೆದಿದೆ.

ಶ್ರೀರಾಮನ ಮೇಲಿನ ಅಪಾರ ಭಕ್ತಿ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುವ ಸಂಕಲ್ಪದೊಂದಿಗೆ ಭಕ್ತರು ಈ ಯಾತ್ರೆಯನ್ನು ಕೈಗೊಂಡಿದ್ದಾರೆ. ಹಲವು ದಿನಗಳ ಕಾಲ ನಡೆಯಲಿರುವ ಈ ಪ್ರವಾಸದಲ್ಲಿ ಪ್ರಮುಖ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಯಾತ್ರೆಗೆ ಮುನ್ನ ಗ್ರಾಮದಲ್ಲಿ ಭಕ್ತರು ಹಾಗೂ ಗ್ರಾಮಸ್ಥರು ಸೇರಿ ಶುಭ ಹಾರೈಸಿದರು. ಧಾರ್ಮಿಕ ಭಾವನೆಯೊಂದಿಗೆ ಹೊರಟಿರುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಪ್ರಯಾಣ ಪೂರ್ಣಗೊಳಿಸಿ ಮರಳಿ ಗ್ರಾಮಕ್ಕೆ ಬರಲಿ ಎಂದು ಹಾರೈಸಲಾಯಿತು.

ಈ ಕುರಿತು ಗ್ರಾಮದ ಮುಖಂಡ ಮಲ್ಲಿಕಾರ್ಜುನ ಜವಳಗಟ್ಟಿ ಮಾತನಾಡಿ, ಗ್ರಾಮದ 15ಕ್ಕೂ ಹೆಚ್ಚು ರಾಮಭಕ್ತರು ಒಗ್ಗೂಡಿ ಅಯೋಧ್ಯೆ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಿದ್ದಾರೆ. ಶ್ರೀರಾಮನ ದರ್ಶನ ಪಡೆದು ದೇಶದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande