
ಬಳ್ಳಾರಿ, 20 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಹಿಂದುಳಿದ ವರ್ಗಗಳ ನೇತಾರ, ಧೀಮಂತ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ದಿವಗಂತ ಡಿ. ದೇವರಾಜ ಅರಸು ಮತ್ತು ಆಧುನಿಕ ಭಾರತ ನಿರ್ಮಾತೃ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ದಿವಗಂತ ರಾಜೀವ್ ಗಾಂಧಿಯವರ ಭಾವ ಚಿತ್ರಗಳಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಲ್. ಮಾರೆಣ್ಣ, ವೆಂಕಟೇಶ್ ಪ್ರಸಾದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಾಯೂನ್ ಖಾನ್, ಲಿಡ್ಕರ್ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ಮಹಾಪೌರರಾದ ಪಿ. ಗಾದೆಪ್ಪ, ಡಿಸಿಸಿ ಕಾರ್ಯಾಧ್ಯಕ್ಷರಾದ ವಿಷ್ಣು ಭೋಯಾಪಾಟಿ, ಡಿಸಿಸಿ ಉಪಾಧ್ಯಕ್ಷರಾದ ಕೆ. ಶ್ರೀನಿವಾಸುಲು, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ಇ. ಚಿದಾನಂದಪ್ಪ, ಡಿಸಿಸಿ ಕಾರ್ಯದರ್ಶಿಗಳಾದ ವೈ. ಶ್ರೀನಿವಾಸುಲು, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮೀ ನಾರಾಯಣ, ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಎರಕುಲಸ್ವಾಮಿ, ಕನೇಕಲ್ ಮೆಹಬೂಬ್ ಸಾಬ್, ಶ್ರೀಕಾಂತ್, ಅತಾವುಲ್ಲಾ, ಜೋಗಿನ ಚಂದ್ರಪ್ಪ, ಅಖಿಲ್ ಅಹಮ್ಮದ್, ಮಹಾನಗರ ಪಾಲಿಕೆ ಸದಸ್ಯರಾದ ಜಗನ್ನಾಥ್, ಮುಖಂಡರುಗಳಾದ ಯಾತಿಂದ್ರಗೌಡ, ವೀರೇಂದ್ರ ಕುಮಾರ್, ಮಧು ಮಲ್ಲಯ್ಯ, ಬಿ. ಮುರಳಿ, ಶ್ರೀಮತಿ ಬಿ.ಎ. ಮಲ್ಲೇಶ್ವರಿ, ಗೋನಾಳ್ ನಾಗಭೂಷಣಗೌಡ, ಪರ್ವಿನ್ ಭಾನು, ಸಂಗನಕಲ್ ವಿಜಯ ಕುಮಾರ್, ಹನುಮೇಶ್, ಆಫ್ರಿನ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್