ಸೆಪ್ಟೆಂಬರ್ 9 : ಎತ್ತಿನಬೂದಿಹಾಳು ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ರಥೋತ್ಸವ
ಬಳ್ಳಾರಿ, 19 ಆಗಸ್ಟ್ (ಹಿ.ಸ.) ಆ್ಯಂಕರ್ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಅಧೀನದ ಬಳ್ಳಾರಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಎತ್ತಿನಬೂದಿಹಾಳಿನ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಹಾಗೂ ಧಾರ್ಮಿಕ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 7 ರ
ಸೆಪ್ಟೆಂಬರ್ 9 : ಎತ್ತಿನಬೂದಿಹಾಳು ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ರಥೋತ್ಸವ


ಬಳ್ಳಾರಿ, 19 ಆಗಸ್ಟ್ (ಹಿ.ಸ.)

ಆ್ಯಂಕರ್ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಅಧೀನದ ಬಳ್ಳಾರಿ ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಎತ್ತಿನಬೂದಿಹಾಳಿನ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಹಾಗೂ ಧಾರ್ಮಿಕ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 7 ರಿಂದ 9 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಸೆಪ್ಟೆಂಬರ್ 7 ರಂದು ಮುಂಜಾನೆ 5 ರಿಂದ 7 ಗಂಟೆಯವರೆಗೆ ಸ್ವಾಮಿಗೆ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಲಿದೆ. ಸಂಜೆ 6 ಗಂಟೆಗೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಂಗೆ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ತರಲಾಗುವುದು.

ಸೆಪ್ಟೆಂಬರ್ 8 ರಂದು ರಾತ್ರಿ ಭಜನೆ, ಪುರವಂತಿಕೆ ಹಾಗೂ ಶ್ರೀ ಸ್ವಾಮಿಯ ಭವ್ಯ ಪಲ್ಲಕ್ಕಿ ಉತ್ಸವ ಜರುಗಲಿದೆ.

ಸೆಪ್ಟೆಂಬರ್ 9 ರಂದು ಮುಂಜಾನೆ 6 ಗಂಟೆಗೆ ಶ್ರೀ ಗುರುಕಟ್ಟೆ ಬಸವೇಶ್ವರ ಸ್ವಾಮಿಯ ಉಚ್ಚಾಯ ನೆರವೇರಲಿದೆ. ಸಂಜೆ 4 ಗಂಟೆಗೆ ರಥೋತ್ಸವದ ಪ್ರತಿಷ್ಠಿತ ‘ಮುಕ್ತಿ ಬಾವುಟ’ದ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ.

ಸಂಜೆ 5.06 ಕ್ಕೆ ಮಹಾ ರಥೋತ್ಸವ ವಿಜೃಂಭಣೆಯಿ0ದ ಜರುಗಲಿದ್ದು, ಈ ಎಲ್ಲಾ ಧಾರ್ಮಿಕ ಕೈಂಕರ್ಯಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande