ತೆರಿಗೆದಾರರಿಗೆ ಗೌರವ ನೀಡಿ:ಭರತ್.ಆರ್
ಬಳ್ಳಾರಿ, 19 ಆಗಸ್ಟ್ (ಹಿ.ಸ.) ಆ್ಯಂಕರ್ : ಉದ್ಯೋಗ ಸೃಷ್ಟಿಸಿ, ದೇಶದ ಮೂಲಸೌಕರ್ಯ ನಿರ್ಮಾಣಕ್ಕೆ ಕೊಡುಗೆ ನೀಡುವ ತೆರಿಗೆದಾರರನ್ನು ಗೌರವಯುತವಾಗಿ ಕಾಣುವುದು ಇಲಾಖೆಯ ಕರ್ತವ್ಯ. ಕಚೇರಿಗೆ ಬರುವ ತೆರಿಗೆದಾರರನ್ನು ಸೂಕ್ತ ಸೌಲಭ್ಯ, ಗೌರವ ನೀಡಿ ಸತ್ಕರಿಸಿ ವಹಿವಾಟುಗಳ ಕುರಿತು ಸಮಾಲೋಚಿಸಬೇಕು ಎಂದು ಹುಬ
ತೆರಿಗೆದಾರರಿಗೆ ಗೌರವ ನೀಡಿ, ಸಮಾಲೋಚಿಸಿ


ತೆರಿಗೆದಾರರಿಗೆ ಗೌರವ ನೀಡಿ, ಸಮಾಲೋಚಿಸಿ


ಬಳ್ಳಾರಿ, 19 ಆಗಸ್ಟ್ (ಹಿ.ಸ.)

ಆ್ಯಂಕರ್ : ಉದ್ಯೋಗ ಸೃಷ್ಟಿಸಿ, ದೇಶದ ಮೂಲಸೌಕರ್ಯ ನಿರ್ಮಾಣಕ್ಕೆ ಕೊಡುಗೆ ನೀಡುವ ತೆರಿಗೆದಾರರನ್ನು ಗೌರವಯುತವಾಗಿ ಕಾಣುವುದು ಇಲಾಖೆಯ ಕರ್ತವ್ಯ. ಕಚೇರಿಗೆ ಬರುವ ತೆರಿಗೆದಾರರನ್ನು ಸೂಕ್ತ ಸೌಲಭ್ಯ, ಗೌರವ ನೀಡಿ ಸತ್ಕರಿಸಿ ವಹಿವಾಟುಗಳ ಕುರಿತು ಸಮಾಲೋಚಿಸಬೇಕು ಎಂದು ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಜಂಟಿ ನಿರ್ದೇಶಕ ಭರತ್.ಆರ್ ಅವರು ಹೇಳಿದರು.

ನಗರದ ಇನ್ಫೆಂಟ್ರಿ ರಸ್ತೆಯ ನೇತಾಜಿ ನಗರದ ಕೆ.ಎಚ್.ಬಿ ಕಾಲೋನಿಯ (ವಾರ್ಡ್ ನಂ. 25) ಎ.ಬಿ.ಆರ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ಆದಾಯ ತೆರಿಗೆ ತನಿಖಾ ವಿಭಾಗದ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗದಿಂದ ಬೀದರ್ ವರೆಗಿನ 12-13 ಜಿಲ್ಲೆಗಳ ಪೈಕಿ ಬಳ್ಳಾರಿಯು ಗರಿಷ್ಠ ಜಿಎಸ್ಟಿ ನೋಂದಣಿ ಹಾಗೂ ಅತಿ ಹೆಚ್ಚು ಬ್ಯಾಂಕಿ0ಗ್ ವಹಿವಾಟು ಹೊಂದಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲಾಖೆಯು ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ನಡೆಸಿದ ‘ಆಪರೇಷನ್ ನಡ್ಜ್’ ಅಡಿಯಲ್ಲಿ ಬಳ್ಳಾರಿಯಲ್ಲೇ ಸುಮಾರು 40 ಜೆಡಿಎ ರಿಯಲ್ ಎಸ್ಟೇಟ್ ಯೋಜನೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ವ್ಯಾಪ್ತಿಯೊಂದರಲ್ಲೇ ತೆರಿಗೆ ವಂಚನೆಗೆ 200ಕ್ಕೂ ಹೆಚ್ಚು ಅರ್ಜಿಗಳು/ದೂರುಗಳು ಬಂದಿದ್ದು, ಇತ್ತೀಚೆಗೆ 40 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ವಹಿವಾಟುಗಳ ಆಳವಾದ ತನಿಖೆ ಹಾಗೂ ಅಗತ್ಯವಿದ್ದಲ್ಲಿ ಸರ್ವೆ/ದಾಳಿ ಕಾರ್ಯಾಚರಣೆಗಳು ಮುಂದುವರಿಯಲಿವೆ. ಸ್ಥಳೀಯ ಆರ್ಥಿಕ ಸ್ಥಿತಿಗತಿ ಹಾಗೂ ತೆರಿಗೆ ಸಂಗ್ರಹ ವೃದ್ಧಿಗಾಗಿ ಸಿಎ ಮತ್ತು ವೃತ್ತಿಪರರೊಂದಿಗೆ ನಿಯಮಿತವಾಗಿ ಸಂವಾದ ನಡೆಸಲು ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದರು.

ಬಳ್ಳಾರಿಯ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ(ತನಿಖೆ) ಎ.ಪಿ. ವಿಜಯ್ ಚಂದ್ರ ಅವರು ಮಾತನಾಡಿ, ಸುಮಾರು 15 ರಿಂದ 20 ವರ್ಷಗಳ ಕಾಲ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಇದೀಗ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊ0ಡಿದ್ದು, ನೂತನ ಹಾಗೂ ಸುಸಜ್ಜಿತ ಕಚೇರಿ ಕಾರ್ಯಾರಂಭಗೊಂಡಿರುವುದು ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ಒದಗಿಸಲು ಬದ್ಧತೆ ಹೊಂದಲಾಗುವುದು ಎಂದು ಹೇಳಿದರು.

ಒಂದು ತಿಂಗಳ ಹಿಂದೆ ಬಳ್ಳಾರಿ ಕಚೇರಿಗೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು, ಹಳೆಯ ಕಟ್ಟಡದ ಸ್ಥಿತಿ ಗಮನಿಸಿ ತಕ್ಷಣವೇ ನೂತನ ಕಟ್ಟಡಕ್ಕೆ ಬದಲಾಯಿಸಲು ಸೂಚನೆ ನೀಡಿದ್ದರು. ನೂತನ ಕಚೇರಿಗೆ ಅಗತ್ಯವಿರುವ ಪೀಠೋಪಕರಣ ಹಾಗೂ ಮೂಲಸೌಕರ್ಯಗಳಿಗಾಗಿ ಪಿಡಿಐಟಿ ಮಟ್ಟದಲ್ಲಿ ನಿರಂತರ ಸಂಪರ್ಕ ಸಾಧಿಸಿ, ತ್ವರಿತವಾಗಿ ಅನುದಾನ ಒದಗಿಸುವಲ್ಲಿ ಇಲಾಖಾ ಮುಖ್ಯಸ್ಥರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಸಹಾಯಕ ನಿರ್ದೇಶಕ ಕೆ.ಗೋಪಾಲ್ ಕೃಷ್ಣಮೂರ್ತಿ ಅವರು ಮಾತನಾಡಿ, ನೂತನ ಕಚೇರಿಯ ಮೂಲಕ ತನಿಖಾ ವಿಭಾಗವು ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಿ, ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಇಲಾಖೆಗೆ ಉತ್ತಮ ಹೆಸರು ತರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ಆದಾಯ ತೆರಿಗೆ (ವೃತ್ತ- 1) ಇಲಾಖೆಯ ಸಹಾಯಕ ಆಯುಕ್ತ ಡಿ.ಪಾಂಡುರ0ಗ, ಬಳ್ಳಾರಿ ವಿಭಾಗದ ಆದಾಯ ತೆರಿಗೆ (ಮುಖ್ಯ ವೃತ್ತ) ಇಲಾಖೆಯ ಸಹಾಯಕ ಆಯುಕ್ತ ಬಿ.ಜೆ.ರವಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಸಿಎ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande