ಇಸ್ರೋ ಹಾಗೂ ಬೆಂಗಳೂರು ಉತ್ತರ ವಿವಿ ಜಂಟಿ ಆಶ್ರಯದಲ್ಲಿ ಬಾಹ್ಯಾಕಾಶ ದಿನಾಚರಣೆ
ಇಸ್ರೋ ಹಾಗೂ ಬೆಂಗಳೂರು ಉತ್ತರ ವಿವಿ ಜಂಟಿ ಆಶ್ರಯದಲ್ಲಿ ಬಾಹ್ಯಾಕಾಶ ದಿನಾಚರಣೆ
ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಲೀಓಸ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ಕೋಲಾರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟಿçÃಯ ಬಾಹ್ಯಾಕಾಶ ದಿನಾಚರಣೆ -೨೦೨೬ಅನ್ನು ಎಲೆಕ್ಟೊçÃ-ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಆರ್. ವೆಂಕಟೇಶ್ವರನ್ ಉದ್ಘಾಟಿಸಿದರು.


ಕೋಲಾರ, ಆಗಸ್ಟ್ ೧೯ (ಹಿ.ಸ):

ಆ್ಯಂಕರ್ : ಯುವಜನರು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ಹೊಸ ಆವಿಷ್ಕಾರಗಳ ಮೂಲಕ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿಸಲು ಶ್ರಮಿಸಬೇಕು ಎಂದು ಎಲೆಕ್ಟೊ-ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಆರ್. ವೆಂಕಟೇಶ್ವರನ್ ಕರೆ ನೀಡಿದರು.

ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಲೀಓಸ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ಬುಧವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ -೨೦೨೬ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಚಂದ್ರಯಾನ-೩ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಕ್ಷಣದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದ ಅವರು, ಒಂದು ಕಾಲದಲ್ಲಿ ಸೈಕಲ್ ಮತ್ತು ಎತ್ತಿನ ಬಂಡಿಗಳಲ್ಲಿ ರಾಕೆಟ್ ಉಪಕರಣಗಳನ್ನು ಸಾಗಿಸುತ್ತಿದ್ದ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಇಂದು ಇಡೀ ವಿಶ್ವವೇ ತಿರುಗಿ ನೋಡುವಷ್ಟು ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದ್ದು, ಇಂದು ವಿಕಸಿತ ಭಾರತ'ದ ಗುರಿ ತಲುಪಲು ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಪ್ರಚೋದಿಸುವುದು ಅಗತ್ಯವಿದೆ ಎಂದರು.

ಇಸ್ರೋದ ಪ್ರಮುಖ ಅಂಗ ಸಂಸ್ಥೆಯಾದ `ಲೀಓಸ್' ಚಂದ್ರಯಾನ-೩ ಮಿಷನ್ಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ನೌಕೆಯನ್ನು ಚಂದ್ರನ ಮೇಲೆ ಸುಲಭವಾಗಿ ಇಳಿಸಲು ನೆರವಾದ 'ಲೇಸರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ' ಹಾಗೂ ಉಪಗ್ರಹದ ಕಕ್ಷೆಯನ್ನು ನಿಖರವಾಗಿ ನಿರ್ಧರಿಸುವ 'ಮೈಕ್ರೋ ಸ್ಟಾರ್ ಸೆನ್ಸರ್'ಗಳನ್ನು ಸ್ಥಳೀಯವಾಗಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಭವಿಷ್ಯದಲ್ಲಿ ಚಂದ್ರಯಾನ-೪, ೫, ೬, ಚಂದ್ರನ ಮೇಲೆ ಮಾನವ ವಸತಿ ಹಾಗೂ `ಸ್ಯಾಟಲೈಟ್ ಸ್ವಾರ್ಮ್ಸ್' ನಂತಹ ಕ್ರಾಂತಿಕಾರಿ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೂ ಇಂದು ಸೌಲಭ್ಯಗಳ ಕೊರತೆಯಿಲ್ಲ. ವಿಕ್ರಮ್ ಸಾರಾಭಾಯಿ ಹಾಗೂ ಯು.ಆರ್. ರಾವ್ ಅವರಂತಹ ಮಹನೀಯರ ಪರಂಪರೆಯನ್ನು ಯುವಪೀಳಿಗೆ ಮುಂದುವರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೊಫೆಸರ್ ಬಿಕೆ ರವಿ ಮಾತನಾಡಿ, ಇಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಇಸ್ರೋದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ನಮ್ಮ ಸಂಚಾಲಕರಾದ ಶೀಲಾ ಅವರು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಅವರನ್ನು ಸಂಪರ್ಕಿಸಿದಾಗ, ಈ ಬಾರಿಯ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಕಾರ್ಯಕ್ರಮವು ನಾನು ಹುಟ್ಟಿದ ಮತ್ತು ವಿದ್ಯಾಭ್ಯಾಸ ಮಾಡಿದ ಕೋಲಾರದಲ್ಲೇ ನಡೆಯಬೇಕು ಮತ್ತು ನನ್ನ ಊರಿನ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ತಲುಪಬೇಕು ಎಂದು ಬಹಳ ಆತ್ಮೀಯತೆಯಿಂದ ಹೇಳಿದರು.

ಇಸ್ರೋದಿಂದ ಆಗಮಿಸಿರುವ ಎಲ್ಲ ಹಿರಿಯ ವಿಜ್ಞಾನಿಗಳು ನಮ್ಮ ಯುವ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಅವರು ದೂರದ ಬೆಂಗಳೂರಿನಿಂದ ಒಂದು ದಿನ ಮುಂಚಿತವಾಗಿಯೇ ಆಗಮಿಸಿ, ನಿಮ್ಮೊಂದಿಗೆ ಸಂವಾದ ನಡೆಸಲು ಬಹಳ ಪ್ರೀತಿಯಿಂದ ಇಲ್ಲಿ ಉಳಿದುಕೊಂಡಿದ್ದಾರೆ ಎಂದರು.

ಬಾಹ್ಯಾಕಾಶ ತಂತ್ರಜ್ಞಾನವು ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿಲ್ಲ. ಕೃಷಿ, ಕೈಗಾರಿಕೆ, ನೀರಾವರಿ, ಆರೋಗ್ಯ, ಶಿಕ್ಷಣ, ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಅದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಸಂದರ್ಭದಲ್ಲಿ ನನ್ನನ್ನು ಕಾಡುತ್ತಿರುವ ಒಂದು ಆತಂಕವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂದು ವಿಜ್ಞಾನವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ದೇಶಕ್ಕೆ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದಿಸಿ, ವಿಶ್ವವಿದ್ಯಾಲಯಗಳಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಮತ್ತು ಪಿಎಚ್.ಡಿ. ಮಟ್ಟದಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಹೆಚ್ಚಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಪ್ರೊಫೆಸರ್.ಕೆ.ಸಿದ್ದಪ್ಪ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಗೆ ಇಸ್ರೋ ಕೊಡಿಗೆ ಅಪಾರವಾಗಿದೆ ಐಟಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಮೆರಿಕಕ್ಕಿಂತ ಮುಂಚೂಣಿಯಲ್ಲಿದೆ ಆರೋಗ್ಯ ಕೃಷಿ ಸಮೂಹನ ಕ್ಷೇತ್ರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯಶಸ್ಸಿಗೆ ಸ್ಯಾಟಿಲೈಟ್ ಗಳ ಕೊಡುಗೆ ಅಪಾರವಾದದ್ದು ನಿಟ್ಟಿನಲ್ಲಿ ವಿಕಸಿತ ಭಾರತದತ್ತ ಯುವಶಕ್ತಿ ಮುನ್ನಡೆಯಬೇಕಿದೆ ಅದಕ್ಕೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥ್ರ್ಯೈವೂ ಬಹಳ ಮುಖ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಇಸ್ರೋ ಸಂಸ್ಥೆಯಿಂದ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ. ಕುಮುದಾ, ಲೇಓಸ್ ಸಹ ನಿರ್ದೇಶಕ ಮುರಳಿಧರ ಕೆ ಆರ್.ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎನ್.ಶ್ರೀನಿವಾಸ್ ಅನುರೂಪ, ಲೇಓಸ್ ಸಂಚಾಲಕರಾದ ಶೀಲಾ, ಸಿಂಡಿಕೇಟ್ ಸದಸ್ಯರಾದ ಜೈದೀಪ್, ಸೀಸಂದ್ರ ಗೋಪಾಲ್ಗೌಡ, ಆಶಾ ಸುಲ್ತಾನ, ಉಪಸ್ಥಿತರಿದ್ದು, ಗಣಿತ ವಿಭಾಗದ ಸಂಯೋಜಕಿ ಸಿ.ಎಸ್.ಶ್ರೀಲತಾ ಅತಿಥಿಗಳನ್ನು ಪರಿಚಯಿಸಿ, ಶೀಲಾ ಸ್ವಾಗತಿಸಿ, ಅಭಿನವ್,ಭರತ್ಗೌಡ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande