ಪಿಎಂ ಉಷಾ ಯೋಜನೆಯಡಿ ಆರೋಗ್ಯ, ನೈರ್ಮಲ್ಯ ಕಾರ್ಯಾಗಾರ
ಪಿಎಂ ಉಷಾ ಯೋಜನೆಯಡಿ ಆರೋಗ್ಯ, ನೈರ್ಮಲ್ಯ ಕಾರ್ಯಾಗಾರ
ಕೋಲಾರ ಜಿಲ್ಲೆಯ ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ `ಆರೋಗ್ಯ ಮತ್ತು ನೈರ್ಮಲ್ಯ' ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.


ಕೋಲಾರ, ಆಗಸ್ಟ್ ೧೯ (ಹಿ.ಸ):

ಆ್ಯಂಕರ್ : ಜಿಲ್ಲೆಯ ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ `ಆರೋಗ್ಯ ಮತ್ತು ನೈರ್ಮಲ್ಯ' ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಕಲಿಕೆ ಸಾಧ್ಯ ಎಂದು ಮೈತ್ರಿ ಮಹಿಳಾ ಕ್ಷೇಮಾಭಿವೃದ್ಧಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಮಂಜುಳಾ ತಿಳಿಸಿದರು.

ಕಾರ್ಯಾಗಾರದ ಪ್ರಥಮ ಅಧಿವೇಶನದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಒಟ್ಟಾರೆ ಕ್ಷೇಮಾಭಿವೃದ್ಧಿಯ ಕುರಿತು ಅರಿವು ಮೂಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದ್ದು, ಇದರ ಪ್ರಯೋಜನ ಪಡೆಯಲು ಕೋರಿದರು.

ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಮಾಹಿತಿಪೂರ್ಣ ಹಾಗೂ ಅತ್ಯಂತ ಸಂವಾದಾತ್ಮಕವಾದ ಉಪನ್ಯಾಸವನ್ನು ನೀಡಿದರು. ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಾದ ನಡೆಯಿತು. ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಪ್ರಶ್ನೆಗಳನ್ನು ಕೇಳುವುದರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.

ದ್ವಿತೀಯ ಅಧಿವೇಶನವನ್ನು ಬೆಂಗಳೂರಿನ ನಿಮ್ಹಾನ್ಸ್ನ ಸಲಹೆಗಾರರಾದ ಸರಸ್ವತಿ ಅವರು ನಡೆಸಿಕೊಟ್ಟು, ಅವರು ವಿದ್ಯಾರ್ಥಿಗಳಿಗೆ ಆರೋಗ್ಯ, ನೈರ್ಮಲ್ಯ, ಭಾವನಾತ್ಮಕ ಕ್ಷೇಮಾಭಿವೃದ್ಧಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮಹತ್ವದ ಕುರಿತು ಅಮೂಲ್ಯವಾದ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ದೀಪಿಕಾ ನಿರ್ವಹಿಸಿದರು. ಹೇಮಾವತಿ, ಬಿ.ಎ. ಅವರು ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಅರ್ಥಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ವಸುಂಧರಾ ಎ.ಎಸ್. ಅವರು ನೆರವೇರಿಸಿದರು.

ಡಾ. ಮಂಜುಳಾ ಮಾತನಾಡಿಅಧಿವೇಶನದ ಕೊನೆಯಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ನಂದೀಶ್ ಅವರು ವಂದನಾರ್ಪಣೆ ಸಲ್ಲಿಸಿದರು. ಹರ್ಷ್ ಬಾಯಿ ಪ್ರಾರ್ಥನೆಯೊಂದಿಗೆ ಆರಂಭವಾದ ಅಧಿವೇಶನಕ್ಕೆ ಅರ್ಥಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಸುಂಧರಾ ಎ.ಎಸ್. ನೇತೃತ್ವ ವಹಿಸಿದ್ದರು.

ಅಧಿವೇಶನದ ಕೊನೆಯಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ನಂದೀಶ್ ವಂದಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಎರಡೂ ಅಧಿವೇಶನಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉತ್ತಮವಾಗಿ ಆಸ್ವಾದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande