
ಬೆಂಗಳೂರು, 19 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜಧಾನಿ ಬೆಂಗಳೂರು ಹೊರವಲಯದ ಬಿಡದಿ ಸಮೀಪದ ಹೆಜ್ಜಾಲದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಬೃಹತ್ ನಕಲಿ ವೈದ್ಯಕೀಯ ತಯಾರಿಕಾ ಜಾಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
ಆಹಾರ ಆರೋಗ್ಯ ಮತ್ತು ಔಷಧಿ ವಿಭಾಗದ ಆಯುಕ್ತ ಶ್ರೀನಿವಾಸ್ ನೇತೃತ್ವದ ತಂಡವು ಈ ದಾಳಿ ನಡೆಸಿದ್ದು, ಅಂದಾಜು 5 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧ ವಶಪಡಿಸಿಕೊಂಡಿದೆ.
ಪ್ರತಿಷ್ಠಿತ ಕಂಪನಿಗಳ ಲೇಬಲ್ಗಳನ್ನು ನಕಲಿಸಿ, ಕಡಿಮೆ ದರದಲ್ಲಿ ಮರುಪ್ಯಾಕಿಂಗ್ ಮಾಡುವ ಮೂಲಕ ಅಸಲಿ ಉತ್ಪನ್ನಗಳಿಗೆ ಮಾರಾಟ ಮಾಡುತ್ತಿರುವ ಅಕ್ರಮ ಜಾಲ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಇದರ ಆಧಾರದ ಮೇಲೆ ಎಚ್ಚೆತ್ತ ಆಹಾರ ಸುರಕ್ಷತೆ ಮತ್ತು ಔಷಧ ವಿಭಾಗದ ಅಧಿಕಾರಿಗಳು ಹೆಜ್ಜಾ ಘಟಕದ ಮೇಲೆ ಹಠಾತ್ ದಾಳಿ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ.
ಯಾವುದೇ ಮಾನ್ಯತೆ ಪಡೆಯದ ಡ್ರಗ್ ಲೈಸೆನ್ಸ್ ಇಲ್ಲದೆ, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ನಕಲಿ ಔಷಧ ತಯಾರಿಕಾ ಘಟಕದ ವಿರುದ್ಧ ಇಲಾಖೆಯು ಕಠಿಣ ಕಾನೂನು ಕ್ರಮ ಕೈಗೊಂಡಿದೆ, ಮುಂದೆಯೂ ಇಂತಹ ಕಟ್ಟು ನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R