ಬಳ್ಳಾರಿ: ಮೂಕ ಬಾಲಕನ ಪೋಷಕರ ಪತ್ತೆಗಾಗಿ ಮನವಿ
ಬಳ್ಳಾರಿ, 19 ಆಗಸ್ಟ್ (ಹಿ.ಸ.) ಆ್ಯಂಕರ್ : ನಗರದಲ್ಲಿ ಅಲೆದಾಡುತ್ತಿದ್ದ ಅಂದಾಜು 12 ವರ್ಷದ ಮೂಕ ಬಾಲಕನೊಬ್ಬ ರಕ್ಷಣೆಯಾಗಿದ್ದು, ಆತನ ಪೋಷಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಜೂನ್ 6ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿ
ಬಳ್ಳಾರಿ:  ಮೂಕ ಬಾಲಕನ ಪೋಷಕರ ಪತ್ತೆಗಾಗಿ ಮನವಿ


ಬಳ್ಳಾರಿ, 19 ಆಗಸ್ಟ್ (ಹಿ.ಸ.)

ಆ್ಯಂಕರ್ : ನಗರದಲ್ಲಿ ಅಲೆದಾಡುತ್ತಿದ್ದ ಅಂದಾಜು 12 ವರ್ಷದ ಮೂಕ ಬಾಲಕನೊಬ್ಬ ರಕ್ಷಣೆಯಾಗಿದ್ದು, ಆತನ ಪೋಷಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಜೂನ್ 6ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಈ ಬಾಲಕನನ್ನು ರಕ್ಷಿಸಿ, ತಾತ್ಕಾಲಿಕ ಆಶ್ರಯ ಹಾಗೂ ರಕ್ಷಣೆಗಾಗಿ ಇಲ್ಲಿನ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಿದ್ದರು.

ಬಾಲಕನು ಮೂಕನಾಗಿದ್ದು ಮಾತನಾಡಲು ಬರುವುದಿಲ್ಲ. ಜೊತೆಗೆ ಯಾವುದೇ ಭಾಷೆಯಲ್ಲಿ ಓದಲು, ಬರೆಯಲು ಬಾರದಿರುವುದರಿಂದ ಆತನ ಹೆಸರು, ಊರು ಹಾಗೂ ಪೋಷಕರ ವಿವರ ಲಭ್ಯವಾಗಿಲ್ಲ. ಈ ಹಿಂದೆ ಆತನ ಹೆಸರಿನಲ್ಲಿ ಯಾವುದೇ ಆಧಾರ್ ನೋಂದಣಿಯೂ ಆಗಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

*ಚಹರೆ ಗುರುತು:*

ಎತ್ತರ 4.2 ಅಡಿ, 40 ಕೆ.ಜಿ ತೂಕ, ಸಾಧಾರಣ ಮೈಕಟ್ಟು, ಉದ್ದ ಮುಖ, ಕಪ್ಪು ಮೈ ಬಣ್ಣ, ಕಪ್ಪು ತಲೆ ಕೂದಲು ಹೊಂದಿರುತ್ತಾನೆ. ಕಿವುಡ ಮತ್ತು ಮೂಗ, ಸಾಮಾನ್ಯ ಗುಣ ಸ್ವಭಾವದನಾಗಿರುತ್ತಾನೆ. ಬಾಲಕ ಸಿಕ್ಕಾಗ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಹಳದಿ ಚೆಕ್ ಅಂಗಿ ಧರಿಸಿರುತ್ತಾನೆ.

ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಿದ್ದಲ್ಲಿ ಅಥವಾ ಆತನ ಪೋಷಕರ ಸುಳಿವು ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ ಹತ್ತಿರ, ಎನ್.ಸಿ.ಸಿ. ಕಾಂಪೌ0ಡ್, ಕಂಟೋನ್ಮೆ0ಟ್, ಬಳ್ಳಾರಿ ಅಥವಾ ದೂ.08392-241373, 08392-242065, ಅಧೀಕ್ಷಕರ ಮೊ.9886555312, 8618825644 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande