ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಗದಗ, 19 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿನ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿರುವ ಹಾಗೂ ಹಲವು ವರ್ಷಗಳಿಂದ ಲೆಕ್ಕಪರಿಶೋಧನೆ ಮತ್ತು ಚುನಾವಣೆ ನಡೆಸದ 11 ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಹಕಾರ ಸಂಘಗಳು ಸುಮಾರು 5ರಿಂದ 10 ವರ್ಷಗಳಿಂದ ಯಾವುದೇ ರ
ಫೋಟೋ


ಗದಗ, 19 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿನ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿರುವ ಹಾಗೂ ಹಲವು ವರ್ಷಗಳಿಂದ ಲೆಕ್ಕಪರಿಶೋಧನೆ ಮತ್ತು ಚುನಾವಣೆ ನಡೆಸದ 11 ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಸಹಕಾರ ಸಂಘಗಳು ಸುಮಾರು 5ರಿಂದ 10 ವರ್ಷಗಳಿಂದ ಯಾವುದೇ ರೀತಿಯ ಕಾರ್ಯಾಚರಣೆ ನಡೆಸದೇ ಸ್ಥಗಿತಗೊಂಡಿವೆ. ಅಲ್ಲದೇ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿಲ್ಲ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ವಾರ್ಷಿಕ ಮಹಾಸಭೆಗಳನ್ನು ನಡೆಸಿಲ್ಲ. ಸಂಘಗಳನ್ನು ಪುನಃಶ್ಚೇತನಗೊಳಿಸಲು ಆಡಳಿತ ಮಂಡಳಿ ಸದಸ್ಯರು ಹಾಗೂ ಸಾಮಾನ್ಯ ಸದಸ್ಯರು ಆಸಕ್ತಿ ತೋರಿಸಿಲ್ಲ. ಅಢಾವೆ ಪತ್ರಿಕೆಗಳು ಲಭ್ಯವಿಲ್ಲದಿರುವುದು ಹಾಗೂ ಆಡಳಿತ ಮಂಡಳಿ ಸದಸ್ಯರ ವಿಳಾಸಗಳು ಪತ್ತೆಯಾಗದಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘಗಳಿಂದ ಬರಬೇಕಾದ ಹಣವಾಗಲಿ, ಸದಸ್ಯರಿಗೆ ಕೊಡಬೇಕಾದ ಹಣವಾಗಲಿ, ಅಥವಾ ಸದಸ್ಯರು ಹಾಗೂ ಸಾರ್ವಜನಿಕರು ಪಿಗ್ಮಿ ಅಥವಾ ಠೇವಣಿ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದರೆ, ಸಂಬಂಧಪಟ್ಟವರು ಮೂಲ ದಾಖಲೆಗಳೊಂದಿಗೆ ಕಚೇರಿ ವೇಳೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು, ಗದಗ ಜಿಲ್ಲೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 125, ಗದಗ ಅವರನ್ನು ಸಂಪರ್ಕಿಸಬಹುದು.

ಈ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ಸಂಬಂಧಪಟ್ಟವರು ಆಕ್ಷೇಪಣೆ ಅಥವಾ ತಮ್ಮ ಹಕ್ಕು-ಹಿತಾಸಕ್ತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಾಗಬೇಕು. ನಿಗದಿತ ಅವಧಿಯಲ್ಲಿ ಯಾರೂ ಹಾಜರಾಗದಿದ್ದಲ್ಲಿ ಸಹಕಾರ ಸಂಘಗಳ ನೋಂದಣಿ ರದ್ದುಗೊಳಿಸಲಾಗುವುದು. ನಂತರ ಉಂಟಾಗುವ ಯಾವುದೇ ಹೊಣೆಗಾರಿಕೆಗೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಣಿ ರದ್ದತಿಗೆ ಒಳಪಡಲಿರುವ ಸಹಕಾರ ಸಂಘಗಳು:

ವರ್ಧಮಾನ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ನಿ., ಗಜೇಂದ್ರಗಡ.,ನರೇಗಲ್ ಅರ್ಬನ್ ಪತ್ತು ಬೆಳೆಸುವವರ ಸಹಕಾರ ಸಂಘ ನಿ., ನರೇಗಲ್. ವರವೀರಭದ್ರೇಶ್ವರ ಮನೆ ಕಟ್ಟುವವರ ಸಹಕಾರ ಸಂಘ ನಿ., ಕುರಡಗಿ, ರೋಣ ತಾಲೂಕು, ಶ್ರೀ ಮಾರುತೇಶ್ವರ ಪತ್ತಿನ ಸಹಕಾರ ಸಂಘ ನಿ., ಕುರಹಟ್ಟಿ, ರೋಣ ತಾಲೂಕು, ಜಯಪ್ರಕಾಶ ಪ್ರಿಂಟಿಂಗ್ ಕೋ-ಆಪ್ ಸೊಸೈಟಿ ನಿ., ಗದಗ.

ಮದಗಾನೂರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಮದಗಾನೂರ, ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹೊಸಡಂಬಳ, ಮುಂಡರಗಿ ತಾಲೂಕು. ಮೌಲಾನ ಆಝಾದ್ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಗದಗ.

ಶ್ರೀ ಬೂದೇಶ್ವರ ಕುರಿ ಮತ್ತು ಉಣ್ಣೆ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ನಿ., ಹೊಸಳ್ಳಿ.

ಶ್ರೀ ಆದಿಶಕ್ತಿ ಎಸ್ಸಿ/ಎಸ್ಟಿ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಬೆಳದಡಿ. ಶ್ರೀ ಕೃಷ್ಣ ಕೈಮಗ್ಗ ಮತ್ತು ಪೀಠೋಪಕರಣ ತಯಾರಕರ ಕೈಗಾರಿಕಾ ಸಹಕಾರ ಸಂಘ ನಿ., ಗದಗ-ಬೆಟಗೇರಿ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande