ವಿಜಯಪುರ: ಮಲಘಾಣ ಕಾಲುವೆಯಿಂದ ಅಕ್ರಮ ನೀರು ಬಳಕೆ: ಕಾನೂನು ಕ್ರಮದ ಎಚ್ಚರಿಕೆ
ವಿಜಯಪುರ, 19 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಲಘಾಣ ಕಾಲುವೆಗೆ ಅಕ್ರಮವಾಗಿ ಪೈಪ್ಲೈನ್ ಅಳವಡಿಸಿ ನೀರು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾಲುವೆಯಿಂದ ಸೈಫನ್ ಮೂಲಕ ಅಕ್ರಮವಾಗಿ ನೀರು ಪಡೆದು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಸುಮಾರು 30
ನೀರು


ವಿಜಯಪುರ, 19 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಲಘಾಣ ಕಾಲುವೆಗೆ ಅಕ್ರಮವಾಗಿ ಪೈಪ್ಲೈನ್ ಅಳವಡಿಸಿ ನೀರು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಾಲುವೆಯಿಂದ ಸೈಫನ್ ಮೂಲಕ ಅಕ್ರಮವಾಗಿ ನೀರು ಪಡೆದು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಸುಮಾರು 30 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಕಾಲುವೆ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಪೈಪ್ಗಳನ್ನು ಅಳವಡಿಸಿ ನೀರು ಪಡೆಯುತ್ತಿರುವುದರಿಂದ ಅಧಿಕೃತವಾಗಿ ನೀರು ಪಡೆಯುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಕಾಲುವೆಯ ನೀರಿನ ಸಮರ್ಪಕ ಹಂಚಿಕೆಗೂ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ಪೈಪ್ಲೈನ್ ಅಳವಡಿಸಿ ಸೈಫನ್ ಮೂಲಕ ನೀರು ಪಡೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸುವುದರ ಜೊತೆಗೆ, ನೀರು ಕಳ್ಳತನಕ್ಕೆ ಬಳಸಿರುವ ಪೈಪ್ಲೈನ್ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುತ್ತಿದೆ.

ಕಾಲುವೆ ನೀರನ್ನು ನಿಯಮಾನುಸಾರ ಹಾಗೂ ಸಮರ್ಪಕವಾಗಿ ಬಳಸಬೇಕು.

ಅಕ್ರಮವಾಗಿ ನೀರು ಪಡೆಯುವ ಮೂಲಕ ಇತರ ರೈತರಿಗೆ ಅನ್ಯಾಯ ಮಾಡದಂತೆ ಸ್ಥಳಿಯ ಅಧಿಕಾರಿ ಬಸವರಾಜ ಮಸಳಿ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande