ಜಿಬಿಎ ಆದೇಶ: ಖಾಲಿ ನಿವೇಶನ ಸ್ವಚ್ಛತೆಗೆ ಗಡುವು, ಜೆಸಿಬಿ ಬಾಡಿಗೆ ಏರಿಕೆ
ಸಾರ್ವಜನಿಕರ ಆಕ್ರೋಶ ಮತ್ತು ಮನವಿ
jcb-rent-hike-bengaluru


ಬೆಂಗಳೂರು, 18 ಆಗಸ್ಟ್ (ಹಿ.ಸ.):

ಆ್ಯಂಕರ್:

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ನೀಡಿರುವ ಕಠಿಣ ಆದೇಶದಿಂದ ನಿವೇಶನದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ ಹಾಗೂ ಕಸದ ರಾಶಿಯನ್ನು ಆ.22ರೊಳಗೆ ತೆರವುಗೊಳಿಸುವಂತೆ ಗಡುವು ನೀಡಲಾಗಿದೆ.

ಜಿಬಿಎ ಆದೇಶದ ಹಿನ್ನೆಲೆಯಲ್ಲಿ ಬಡಾವಣೆಗಳಲ್ಲಿ ಜೆಸಿಬಿಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಬಾಡಿಗೆ ದರ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಗಂಟೆಗೆ ಸುಮಾರು ₹1,000 ಇದ್ದ ಜೆಸಿಬಿ ಬಾಡಿಗೆ ಇದೀಗ ನಿವೇಶನವೊಂದಕ್ಕೆ ₹8,000ರಿಂದ ₹10,000ದವರೆಗೆ ಏರಿಕೆಯಾಗಿದೆ. ಖಾಲಿ ನಿವೇಶನಗಳಿರುವ ಬಡಾವಣೆಗಳಲ್ಲಿ ಜೆಸಿಬಿಗಳಿಗಾಗಿ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ನಗರದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜಿಬಿಎ ಕೈಗೊಂಡಿರುವ ಕ್ರಮವನ್ನು ನಿವೇಶನದಾರರು ಸ್ವಾಗತಿಸಿದ್ದಾರೆ. ಆದರೆ, ಸ್ವಚ್ಛತೆಗೆ ಕಡಿಮೆ ಕಾಲಾವಕಾಶ ನೀಡಿರುವುದರಿಂದ ಜೆಸಿಬಿ ಮಾಲೀಕರು ಸಾರ್ವಜನಿಕರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಸಿಬಿ ಬಾಡಿಗೆ ದರಕ್ಕೆ ಸೂಕ್ತ ಮಿತಿ ವಿಧಿಸಬೇಕು ಅಥವಾ ನಿವೇಶನ ಸ್ವಚ್ಛಗೊಳಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಿಸಬೇಕು ಎಂದು ನಿವೇಶನದಾರರು ಜಿಬಿಎ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

----------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande