
ಬೆಂಗಳೂರು , 18 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಧಾನಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ನಗರದ ಒಟ್ಟು 25 ವಿಧಾನಸಭಾ ಕ್ಷೇತ್ರಗಳು 'ಡೇಂಜರ್ ಝೋನ್' ವ್ಯಾಪ್ತಿಗೆ ಬಂದಿದ್ದು, ಈ ಕ್ಷೇತ್ರಗಳಲ್ಲಿ ದೊಡ್ಡ ಮತದಾರರ ಹೆಸರುಗಳ ಪಟ್ಟಿಯಿಂದ ಕೈಬಿಟ್ಟುಹೋಗುವ ಗಂಭೀರ ಆತಂಕ ಎದುರಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ನಿರ್ದಿಷ್ಟ 20 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 40ರಿಂದ 49ರಷ್ಟು ಹಾಗೂ ಇನ್ನುಳಿದ ಪ್ರಮುಖ 5 ಕ್ಷೇತ್ರಗಳಲ್ಲಿ ಶೇ 50ಕ್ಕಿಂತ ಹೆಚ್ಚು ಹೆಚ್ಚು ಹೆಚ್ಚಿನ ಮತದಾರರ ಹೆಸರುಗಳ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಅತಿ ಹೆಚ್ಚಿನ ಪ್ರಮಾಣದ ಕಡಿತದ ನಿರೀಕ್ಷೆಯಿರುವ ಪ್ರಮುಖ ಕ್ಷೇತ್ರಗಳಾದ ದಾಸರಹಳ್ಳಿ, ಸಿ.ವಿ. ರಾಮನ್ ನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ಮತ್ತು ವಿಜಯನಗರ ಕ್ಷೇತ್ರಗಳಲ್ಲಿ ಶೇ 51ರಿಂದ ಶೇ 55ರಷ್ಟು ಮತದಾರರ ಹೆಸರುಗಳು ಡಿಲೀಟ್ ಆಗುವ ಸಂಭವವಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಈ ಬೃಹತ್ ಪ್ರಮಾಣದ ಹೆಸರುಗಳ ಕಡಿತದ ಸಾಧ್ಯತೆಯು ಆಯಾ ಕ್ಷೇತ್ರಗಳ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.ಸಂಬಂಧಿತ ಕ್ಷೇತ್ರಗಳ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮತದಾರರ ಸೇವಾ ಪೋರ್ಟಲ್ ವೆಬ್ಸೈಟ್ ಅಥವಾ ಮುಖ್ಯ ಚುನಾವಣಾಧಿಕಾರಿ ಕರ್ನಾಟಕದ ಅಧಿಕೃತ ಅಧಿಕೃತ ಅಧಿಕಾರಿ ವೆಬ್ ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R