ಹಣ ತರಲು ಹೋದ ವ್ಯಕ್ತಿ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ
ಗದಗ, 18 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ 52 ವರ್ಷದ ನಾಗಪ್ಪ ತಂದೆ ದೇವಪ್ಪ ಪೂಜಾರ ಎಂಬುವವರು ನಾಪತ್ತೆಯಾಗಿದ್ದು, ಪತ್ತೆಗೆ ನರೇಗಲ್ಲ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಜುಲೈ 18ರಂದು ಸಂಜೆ 5 ಗಂಟೆ ಸುಮಾರಿಗೆ ಅಬ್ಬಿಗೇರಿ ಗ್ರಾಮದ ಮನೆಯಿಂದ ಗ
ಫೋಟೋ


ಗದಗ, 18 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ 52 ವರ್ಷದ ನಾಗಪ್ಪ ತಂದೆ ದೇವಪ್ಪ ಪೂಜಾರ ಎಂಬುವವರು ನಾಪತ್ತೆಯಾಗಿದ್ದು, ಪತ್ತೆಗೆ ನರೇಗಲ್ಲ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಜುಲೈ 18ರಂದು ಸಂಜೆ 5 ಗಂಟೆ ಸುಮಾರಿಗೆ ಅಬ್ಬಿಗೇರಿ ಗ್ರಾಮದ ಮನೆಯಿಂದ ಗದಗಕ್ಕೆ ಕಡಲೆ ವ್ಯವಹಾರದ ಹಣ ತರಲು ಹೋಗುವುದಾಗಿ ಕುಟುಂಬದವರಿಗೆ ತಿಳಿಸಿ ತೆರಳಿದ್ದ ನಾಗಪ್ಪ ಅವರು ಇದುವರೆಗೆ ಮನೆಗೆ ಮರಳಿಲ್ಲ. ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಾಗಪ್ಪ ಅವರು 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಸಾದಗಪ್ಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಕರಿಬಿಳಿ ಕೂದಲಿದೆ. ಕನ್ನಡ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ತಿಳಿಕಂದು ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.

ಈ ಚಹರೆಪಟ್ಟಿಯ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ನರೇಗಲ್ಲ ಪೊಲೀಸ್ ಠಾಣೆ ಅಥವಾ ಗದಗ ಜಿಲ್ಲಾ ಪೊಲೀಸ್ ಕಚೇರಿಗೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಂಪರ್ಕ: ಗದಗ ಕಂಟ್ರೋಲ್ ರೂಮ್: 9480804400; ನರಗುಂದ ಡಿಎಸ್ಪಿ: 9480804408; ರೋಣ ಸಿಪಿಐ: 9480804434; ನರೇಗಲ್ಲ ಪಿಎಸ್ಐ: 08381-268233 / 9480804454.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande