
ಕಾರಟಗಿ, 18 ಆಗಸ್ಟ್ (ಹಿ.ಸ.)
ಆ್ಯಂಕರ್ : ಕಾರಟಗಿಯ ಉಪ್ಪಾರ ಓಣಿಯ ನಿವಾಸಿ ವೆಂಕಟೇಶ ತಂದೆ ಯಂಕಪ್ಪ ಸೋಮನಾಳ ಎಂಬ 56 ವರ್ಷದ ವ್ಯಕ್ತಿಯು ಏಪ್ರಿಲ್ 07 ರ ಸಂಜೆ 5.30 ಗಂಟೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ.93/2026 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ:
ಕಾನೆಯಾದ ವ್ಯಕ್ತಿಯು 5.8 ಅಡಿ ಎತ್ತರವಿದ್ದು, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆಗೂದಲು ಹಾಗೂ ದಾಡಿ, ಮೀಸೆ ಹೊಂದಿದ್ದಾರೆ. ಕೈಯಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿದ್ದಾರೆ. ವ್ಯಕ್ತಿಯು ಮನೆಯಿಂದ ಹೊರಗೆ ಹೋಗುವಾಗ ಬಿಳಿ ಬಣ್ಣದ ಮೂರು ಗುಂಡಿಯ ಅಂಗಿ ಮತ್ತು ಬಿಳಿ ದೋತ್ರ ಧರಿಸಿದ್ದರು. ಕನ್ನಡ ಭಾಷೆ ಮಾತ್ರ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ವ್ಯಕ್ತಿ ಎಲ್ಲಾದರೂ ಕಂಡುಬ0ದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ:. 08539-230111, ಜಿಲ್ಲಾ ಪೊಲೀಸ್ ಅಧೀಕ್ಷಕರು ದೂರವಾಣಿ ಸಂಖ್ಯೆ: 08539-230222, ಗಂಗಾವತಿ ಪೊಲೀಸ್ ಉಪವಿಭಾಗಾಧಿಕಾರಿಗಳು ದೂರವಾಣಿ ಸಂಖ್ಯೆ. 08533-230853 ಅಥವಾ ಕಾರಟಗಿ ಠಾಣೆ ಆರಕ್ಷಕ ನಿರೀಕ್ಷಕರು, ದೂರವಾಣಿ ಸಂಖ್ಯೆ: 08533-275331, 9480803754, ಇ-ಮೇಲ್: karatagikpl@ksp.gov.in ಗೆ ಮಾಹಿತಿ ನೀಡಲು ಕಾರಟಗಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್